ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಆರ್‌ಇಡಿಎ ಲಾಭ ಶೇ 33ರಷ್ಟು ಏರಿಕೆ

Published 20 ಏಪ್ರಿಲ್ 2024, 15:18 IST
Last Updated 20 ಏಪ್ರಿಲ್ 2024, 15:18 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐಆರ್‌ಇಡಿಎ), 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹337 ಕೋಟಿ ನಿವ್ವಳ ಲಾಭ ಗಳಿಸಿದೆ. 

2022–23ರ ಇದೇ ತ್ರೈಮಾಸಿಕದಲ್ಲಿ ₹253 ಕೋಟಿ ಲಾಭ ಗಳಿಸಿದೆ. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 33ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ. 

ಕಂಪನಿಯ ಒಟ್ಟು ವರಮಾನವು ₹1,036 ಕೋಟಿಯಿಂದ ₹1,391 ಕೋಟಿಗೆ ಹೆಚ್ಚಳವಾಗಿದೆ. ವೆಚ್ಚವು ₹747 ಕೋಟಿಯಿಂದ ₹911 ಕೋಟಿಗೆ ಮುಟ್ಟಿದೆ. 

ತೆರಿಗೆ ನಂತರ ವಾರ್ಷಿಕ ಲಾಭವು ಶೇ 44ರಷ್ಟು ಹೆಚ್ಚಳವಾಗಿದ್ದು, ₹864 ಕೋಟಿಯಿಂದ ₹1,252 ಕೋಟಿಗೆ ಮುಟ್ಟಿದೆ. ಮಾರ್ಚ್‌ 31ರಂತೆ ಸಾಲದ ಪ್ರಮಾಣವು ₹59,698 ಕೋಟಿಯಾಗಿದೆ. ಹಿಂದಿನ ಇದೇ ಅವಧಿಗಿಂತ ಶೇ 26ರಷ್ಟು ಏರಿಕೆಯಾಗಿದೆ. 

ಸಾಲದ ಮಂಜೂರಾತಿಯು ₹37,353 ಕೋಟಿ ಮತ್ತು ವಿತರಣೆಯು ₹25,089 ಕೋಟಿಯಾಗಿದೆ. ಇದು ಕಂಪನಿಯ ಇತಿಹಾಸದಲ್ಲಿ ಅತ್ಯಧಿಕ ವಾರ್ಷಿಕ ಸಾಲ ವಿತರಣೆ ಮತ್ತು ಮಂಜೂರಾತಿಯಾಗಿದೆ. ಕಂಪನಿಯ ನಿವ್ವಳ ಸಂಪತ್ತು ಶೇ 44ರಷ್ಟು ಏರಿಕೆಯಾಗಿ, ₹8,559 ಕೋಟಿಯಾಗಿದೆ ಎಂದು ಕಂಪನಿ ತಿಳಿಸಿದೆ. ಐಆರ್‌ಇಡಿಎ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT