ಸೋಮವಾರ, ಜೂಲೈ 6, 2020
22 °C

ಐಟಿಸಿ ತೆಕ್ಕೆಗೆ ಸನ್‌ರೈಸ್‌ ಫುಡ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಐಟಿಸಿ ಕಂಪನಿ ಲೋಗೊ–ಸಾಂದರ್ಭಿಕ ಚಿತ್ರ

ನವದೆಹಲಿ: ವೈವಿಧ್ಯಮಯ ವಹಿವಾಟು ನಡೆಸುವ ಉದ್ದಿಮೆ ಸಂಸ್ಥೆ ಐಟಿಸಿ, ಮಸಾಲೆ ತಯಾರಿಸುವ ಸನ್‌ರೈಸ್‌ ಫುಡ್ಸ್‌ ಪ್ರೈವೇಟ್ ಲಿಮಿಟೆಡ್‌ (ಎಸ್‌ಎಫ್‌ಎಪಿಎಲ್‌) ಖರೀದಿಸಿದೆ.

ಈ ಸ್ವಾಧೀನ ಪ್ರಕ್ರಿಯೆಯ ಒಟ್ಟಾರೆ ಮೊತ್ತದ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಖರೀದಿ ಮೊತ್ತ ₹1,800 ಕೋಟಿಗಳಿಂದ ₹2,000 ಕೋಟಿಗಳಷ್ಟು ಇರಲಿದೆ.

70 ವರ್ಷಗಳಿಂದ ವಹಿವಾಟು ನಡೆಸುತ್ತಿರುವ ಸನ್‌ರೈಸ್‌, ಪೂರ್ವ ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇದೆ. ಈ ಉದ್ದೇಶಿತ ಸ್ವಾಧೀನದಿಂದ ತನ್ನ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ ಎಂದು ಐಟಿಸಿ ತಿಳಿಸಿದೆ. ಷೇರು ಖರೀದಿ ಮೂಲಕ ಈ ಸ್ವಾಧೀನ ಪ್ರಕ್ರಿಯೆ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು