ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಆರ್‌ ಶೇ 50ರಷ್ಟು ಹೆಚ್ಚಳ: ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ

Last Updated 4 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ನವದೆಹಲಿ: ನೋಟು ರದ್ದತಿಯಿಂದಾಗಿ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಲ್ಲಿ ಏರಿಕೆಯಾಗಿದೆ.

"2018–19ನೇ ಅಂದಾಜು ವರ್ಷದಲ್ಲಿ ಇದುವರೆಗೆ 6.08 ಕೋಟಿ ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್‌) ಸಲ್ಲಿಕೆಯಾಗಿದ್ದು, ಹಿಂದಿನ ವರ್ಷಕ್ಕಿಂತಲೂ ಶೇ 50ರಷ್ಟು ಏರಿಕೆಯಾಗಿದೆ' ಎಂದು ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ ಮಾಹಿತಿ ನೀಡಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ರೆವಿನ್ಯೂ ಇಲಾಖೆಯು ನೇರ ತೆರಿಗೆ ಮೂಲಕ ₹ 11.5 ಲಕ್ಷ ಕೋಟಿ ಸಂಗ್ರಹಿಸುವ ಗುರಿ ತಲುಪಲಿದೆ.

‘ನೇರ ತೆರಿಗೆಯ ಸರಾಸರಿ ಪ್ರಗತಿ ದರ ಶೇ 16.5ರಷ್ಟಿದ್ದು, ನಿವ್ವಳ ನೇರ ತೆರಿಗೆ ಪ್ರಗತಿ ದರ ಶೇ 14.5ರಷ್ಟಿದೆ. ತೆರಿಗೆ ವ್ಯಾಪ್ತಿ ಹೆಚ್ಚಿಸಲು ನೋಟು ರದ್ದತಿ ನೆರವಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ’ ಎಂದಿದ್ದಾರೆ.

ಇದುವರೆಗಿನ ನೇರ ತೆರಿಗೆ ಸಂಗ್ರಹವು ಬಜೆಟ್‌ ಅಂದಾಜಿನ ಶೇ 48ರಷ್ಟಾಗಿದೆ.

ನೋಟು ರದ್ದತಿ ಬಳಿಕ ಕಾರ್ಪೊರೇಟ್‌ ತೆರಿಗೆ ಪಾವತಿದಾರರ ಸಂಖ್ಯೆ 7 ಲಕ್ಷದಿಂದ 8 ಲಕ್ಷಕ್ಕೆ ಏರಿಕೆಯಾಗಿದೆ.

4 ಗಂಟೆಗಳಲ್ಲಿ ‘ಇ–ಪ್ಯಾನ್‌’: ಪ್ಯಾನ್‌ ವಿತರಣೆ ಸರಳಗೊಳಿಸುವ ಉದ್ದೇಶದಿಂದ ಒಂದು ವರ್ಷದೊಳಗೆ ’ಇ–ಪ್ಯಾನ್‌’ ಸೇವೆ ಆರಂಭಿಸಲಾಗುವುದು. ಅರ್ಜಿ ಸಲ್ಲಿಸಿದ ನಾಲ್ಕು ಗಂಟೆಯೊಳಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಸಿಗಲಿದೆ. ಇದಕ್ಕೆ ದಾಖಲೆಯಾಗಿ ಆಧಾರ್‌ ಸಂಖ್ಯೆಯನ್ನು ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT