ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಜನತಾ ಸೇವಾ ಬ್ಯಾಂಕ್‌ ಲಾಭ ಹೆಚ್ಚಳ

Published 26 ಏಪ್ರಿಲ್ 2024, 0:08 IST
Last Updated 26 ಏಪ್ರಿಲ್ 2024, 0:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜನತಾ ಸೇವಾ ಕೋ‍–ಆಪರೇಟಿವ್‌ ಬ್ಯಾಂಕ್‌ 2023–24ನೇ ಆರ್ಥಿಕ ವರ್ಷದಲ್ಲಿ ₹15.94 ಕೋಟಿ ನಿವ್ವಳ ಲಾಭ ಗಳಿಸಿದೆ.

ಬ್ಯಾಂಕ್‌ನ ಒಟ್ಟು ವ್ಯವಹಾರ ₹2,083.49 ಕೋಟಿ ಆಗಿದೆ. ಷೇರು ಬಂಡವಾಳವು ₹31.07 ಕೋಟಿ ದಾಟಿದೆ. ಆಪದ್ಧನ ನಿಧಿ ಮತ್ತು ಇತರೆ ನಿಧಿಗಳ ಮೊತ್ತವು ₹201.53 ಕೋಟಿ ಆಗಿದ್ದು, ಒಟ್ಟು ₹1,184.33 ಕೋಟಿ ಠೇವಣಿ ಸಂಗ್ರಹಿಸಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. 

ಈ ಅವಧಿಯಲ್ಲಿ ಬ್ಯಾಂಕ್‌ ಒಟ್ಟು 674.67 ಕೋಟಿ ಸಾಲ ನೀಡಿದೆ. ಸರ್ಕಾರಿ ಸಾಲ ಪತ್ರಗಳಲ್ಲಿ ₹663.08 ಕೋಟಿ ಹೂಡಿಕೆ ಮಾಡಿದೆ. ನಿವ್ವಳ ಅನುತ್ಪಾದಕ ಸಾಲವು ಶೂನ್ಯ ಮಟ್ಟದಲ್ಲಿದೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಬ್ಯಾಂಕ್‌ನ ಐದು ಶಾಖೆಗಳಿವೆ. ಷೇರು ಸಂಗ್ರಹ, ಸ್ವಂತ ನಿಧಿ ಕ್ರೋಡೀಕರಣ, ಠೇವಣಿ ಸಂಗ್ರಹ, ಸಾಲ ವಿತರಣೆಯಲ್ಲಿ ರಾಜ್ಯದ ಇತರೆ ಪಟ್ಟಣ ಸಹಕಾರ ಬ್ಯಾಂಕ್‌ಗಳಿಗಿಂತಲೂ ಮುಂದಿದೆ ಎಂದು ಬ್ಯಾಂಕ್‌ನ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT