ಜೆಟ್‌ ಏರ್‌ವೇಸ್‌ನ ಬಿಕ್ಕಟ್ಟುತುರ್ತು ಸಭೆ ಕರೆದ ಪಿಎಂಒ

ಶನಿವಾರ, ಏಪ್ರಿಲ್ 20, 2019
25 °C

ಜೆಟ್‌ ಏರ್‌ವೇಸ್‌ನ ಬಿಕ್ಕಟ್ಟುತುರ್ತು ಸಭೆ ಕರೆದ ಪಿಎಂಒ

Published:
Updated:
Prajavani

ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಚರ್ಚಿಸಲು ಪ್ರಧಾನಿ ಕಚೇರಿಯು (ಪಿಎಂಒ) ತುರ್ತು ಸಭೆ ಕರೆದಿದೆ.

ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಸಂಸ್ಥೆಯಲ್ಲಿನ ವಿದ್ಯಮಾನಗಳನ್ನು ಪರಿಶೀಲಿಸಲು ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರು ಸಚಿವಾಲಯದ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದರಿಂದ ಈ ತುರ್ತು ಸಭೆ ಕರೆಯಲಾಗಿದೆ.

ಹಣಕಾಸು ಮುಗ್ಗಟ್ಟಿನ ಕಾರಣಕ್ಕೆ ಸಂಸ್ಥೆಯು ಈಗಾಗಲೇ ತನ್ನ ಅಂತರರಾಷ್ಟ್ರೀಯ ಸೇವೆಯನ್ನು ರದ್ದುಪಡಿಸಿದೆ. ಇದು ಸೋಮವಾರದವರೆಗೆ ಜಾರಿಯಲ್ಲಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.

50ಕ್ಕೂ ಕಡಿಮೆ ವಿಮಾನ ಹಾರಾಟ: ಸಂಸ್ಥೆಯು ಸದ್ಯಕ್ಕೆ 50ಕ್ಕೂ ಕಡಿಮೆ ವಿಮಾನಗಳ ಹಾರಾಟ ನಿರ್ವಹಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾರಾಟ ನಡೆಸುತ್ತಿರುವ ವಿಮಾನಗಳ ಸಂಖ್ಯೆ ಎಷ್ಟು ಎನ್ನುವುದನ್ನು ಅವರು ಖಚಿತಪಡಿಸಿಲ್ಲ.

16 ಹೊಸ ವಿಮಾನಗಳು: ವಿಮಾನಗಳ ಹಾರಾಟ ರದ್ದು ಸಂಖ್ಯೆ ಕಡಿಮೆ ಮಾಡಲು ಮತ್ತು ದೇಶಿ – ವಿದೇಶಿ ಸೇವೆ ಮುಂದುವರೆಸಲು ಸಂಸ್ಥೆಯು ಗುತ್ತಿಗೆ ಆಧಾರದ ಮೇಲೆ 16 ‘ಬೋಯಿಂಗ್‌ 737–800’ ವಿಮಾನಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಸಂಸ್ಥೆಯು ಶುಕ್ರವಾರ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !