ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 1ರಿಂದ ಜಿಯೊದಿಂದ ಎಲ್ಲ ನೆಟ್‌ವರ್ಕ್‌ಗಳಿಗೆ ಕರೆ ಉಚಿತ!

Last Updated 31 ಡಿಸೆಂಬರ್ 2020, 14:15 IST
ಅಕ್ಷರ ಗಾತ್ರ

ನವದೆಹಲಿ: ಒಂದು ನೆಟ್‌ವರ್ಕ್‌ನಿಂದ ಇನ್ನೊಂದು ನೆಟ್‌ವರ್ಕ್‌ನ ಮೊಬೈಲ್‌ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುವಾಗ ಶುಲ್ಕ ‍ಪಾವತಿಸಬೇಕಿರುವ (ಐಯುಸಿ) ವ್ಯವಸ್ಥೆ ಕೊನೆಗೊಳ್ಳುತ್ತಿರುವ ಕಾರಣ, ಜನವರಿ 1ರಿಂದ ಜಿಯೊದಿಂದ ಬೇರೆ ನೆಟ್‌ವರ್ಕ್‌ಗಳಿಗೆ ಮಾಡುವ ಕರೆಗಳು ಉಚಿತವಾಗಲಿವೆ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನದಂತೆ 2021ರ ಜನವರಿ 1ರಿಂದ ಐಯುಸಿ ಶುಲ್ಕಗಳು ಕೊನೆಗೊಳ್ಳುತ್ತವೆ. ಎಲ್ಲ ದೇಶೀಯ ಧ್ವನಿ ಕರೆಗಳ ಮೇಲಿನ ಮೊಬೈಲ್‌ ನೆಟ್‌ವರ್ಕ್‌ ಅಂತರ್‌ ಸಂಪರ್ಕ ಬಳಕೆ ಶುಲ್ಕವನ್ನು( ಐಯುಸಿ) ರದ್ದುಗೊಳಿಸಿದ ಕೂಡಲೇ ಜಿಯೊ ಉಚಿತ ಕರೆ ಸೌಲಭ್ಯ ಕಲ್ಪಿಸುತ್ತಿದೆ.

‘ಐಯುಸಿ ವ್ಯವಸ್ಥೆ ಕೊನೆಗೊಂಡ ತಕ್ಷಣದಿಂದ, ಜಿಯೊದಿಂದ ಬೇರೆ ನೆಟ್‌ವರ್ಕ್‌ಗಳಿಗೆ ಮಾಡುವ ಕರೆಗಳಿಗೆ ಶುಲ್ಕ ವಿಧಿಸುವುದನ್ನು ರದ್ದು ಮಾಡಲಾಗುವುದು ಎಂದು ಹೇಳಿದ್ದೆವು. ಆ ಮಾತಿಗೆ ಬದ್ಧವಾಗಿ, ಬೇರೆ ನೆಟ್‌ವರ್ಕ್‌ಗಳಿಗೆ ಮಾಡುವ ಕರೆಗಳ ಮೇಲಿನ ಶುಲ್ಕವನ್ನು ರದ್ದು ಮಾಡುತ್ತಿದ್ದೇವೆ. ಜಿಯೊದಿಂದ ಜಿಯೊಗೆ ಮಾಡುವ ಕರೆಗಳು ಯಾವತ್ತೂ ಉಚಿತವಾಗಿಯೇ ಇದ್ದವು’ ಎಂದು ಜಿಯೊ ಪ್ರಕಟಣೆಯಲ್ಲಿ ಹೇಳಿದೆ.

ಈ ಹಿಂದಿನಿಂದಲೂ 'ಜಿಯೊದಿಂದ ಜಿಯೊ' ನೆಟ್‌ವರ್ಕ್‌ಗಳಿಗೆ ಎಲ್ಲ ಕರೆಗಳು ಉಚಿತವಾಗಿ ಸಿಗುತ್ತಿದ್ದು, ಐಯುಸಿ ಕ್ರಮಗಳ ಅನುಸಾರ ಜನವರಿ 1ರಿಂದ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್‌ಗೆ ಮಾಡುವ ವಾಯ್ಸ್‌ ಕಾಲ್‌ಗಳಿಗೆ ಶುಲ್ಕ ಇರುವುದಿಲ್ಲ.

ಕಳೆದ ಒಂದು ವರ್ಷದಿಂದ ರಿಲಯನ್ಸ್‌ ಜಿಯೊದಿಂದ ಇತರೆ ನೆಟ್‌ವರ್ಕ್‌ಗಳಿಗೆ ಮಾಡುವ ಕರೆಗೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುತ್ತಿದೆ. ದೇಶದ ಇತರೆ ನೆಟ್‌ವರ್ಕ್‌ಗಳು ಬೇರೆ ಎಲ್ಲ ನೆಟ್‌ವರ್ಕ್‌ಗಳಿಗೂ ಉಚಿತವಾಗಿಯೇ ಕರೆ ಸೌಲಭ್ಯ ನೀಡುತ್ತಿವೆ. ಆದರೆ, ಗ್ರಾಹಕರು ಜಿಯೊಗೆ ಪಾವತಿಸುವ ಹಣಕ್ಕೆ ತಕ್ಕಷ್ಟು ಡೇಟಾ ನೀಡುವ ಮೂಲಕ ಪೈಪೋಟಿ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT