ನವದೆಹಲಿ: ಅಮೆರಿಕದ ಬ್ಲ್ಯಾಕ್ರಾಕ್ ಮತ್ತು ಭಾರತದ ಜಿಯೊ ಫೈನಾನ್ಸಿಯಲ್ ಸರ್ವಿಸಸ್ನ ಜಂಟಿ ಸಹಭಾಗಿತ್ವದ ‘ಜಿಯೊ ಬ್ಲ್ಯಾಕ್ರಾಕ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ’ಯು ಪ್ರಮುಖ ಹುದ್ದೆಗಳಿಗೆ ನೇಮಕಾತಿ ನಡೆಸಿರುವುದನ್ನು ಘೋಷಿಸಿದೆ.

ಕಳೆದ ತಿಂಗಳು ಸಿದ್ ಸ್ವಾಮಿನಾಥನ್ ಅವರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಿತ್ತು.

ಅಮಿತ್ ಭೋಸಲೆ ಅವರನ್ನು ಚೀಫ್ ರಿಸ್ಕ್ ಆಫೀಸರ್ (ಸಿಆರ್ಒ) ಆಗಿ ನೇಮಕ ಮಾಡಿದೆ. ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಅಮೋಲ್ ಪೈ ಮತ್ತು ಉತ್ಪನ್ನಗಳ ವಿಭಾಗದ ಮುಖ್ಯಸ್ಥರಾಗಿ ಬಿರಾಜ ತ್ರಿಪಾಠಿ ಹಾಗೂ ಇತರರನ್ನು ನೇಮಿಸಿದೆ.

ಮ್ಯೂಚುವಲ್ ಫಂಡ್ ವ್ಯವಹಾರದ ಕಾರ್ಯಾಚರಣೆ ಆರಂಭಿಸಲು ಜಿಯೊ ಬ್ಲ್ಯಾಕ್ರಾಕ್ ಅಸೆಟ್ ಮ್ಯಾನೇಜ್ಮೆಂಟ್ಗೆ ಮೇ 26ರಂದು, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.