ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ನಿಂದ ಗೃಹ, ವಾಹನ ಸಾಲ ಯೋಜನೆ

Published 17 ಅಕ್ಟೋಬರ್ 2023, 13:07 IST
Last Updated 17 ಅಕ್ಟೋಬರ್ 2023, 13:07 IST
ಅಕ್ಷರ ಗಾತ್ರ

ಬೆಂಗಳೂರು: ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಯು ವಾಹನ, ಗೃಹ ಸಾಲ ಯೋಜನೆಗಳನ್ನು ಜಾರಿಗೊಳಿಸುವ ಆಲೋಚನೆ ನಡೆಸಿದೆ. ಈ ಮೂಲಕ ಪೂರ್ಣ ಪ್ರಮಾಣದಲ್ಲಿ ಹಣಕಾಸು ಸೇವೆಗಳನ್ನು ನೀಡುವ ಕಂಪನಿಯಾಗಲು ಉದ್ದೇಶಿಸಿದೆ.

ಹಣಕಾಸು ಹೂಡಿಕೆ ಉತ್ಪನ್ನಗಳು ಭಾರತದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿವೆ. ಹೀಗಿದ್ದರೂ ದೇಶದ ಆರ್ಥಿಕತೆಯ ಗಾತ್ರಕ್ಕೆ ಹೋಲಿಸಿದರೆ ಬೆಳವಣಿಗೆಯ ವೇಗವು ಕಡಿಮೆ ಇದೆ. ಹೀಗಾಗಿ ಮುಕೇಶ್‌ ಅಂಬಾನಿ ಒಡೆತನದ ಈ ಕಂಪನಿಯು ಈ ಬಗ್ಗೆ ಹೆಚ್ಚು ಗಮನ ಹರಿಸಲು ಮುಂದಾಗಿದೆ. 

ಕಂಪನಿಯು ವೇತನ ವರ್ಗದವರು ಮತ್ತು ಸ್ವಂತ ಉದ್ಯೋಗ ಮಾಡುವವರಿಗಾಗಿ ವೈಯಕ್ತಿಕ ಸಾಲ ನೀಡುವ ಯೋಜನೆಯನ್ನು ಮುಂಬೈನಲ್ಲಿ ಈಗಾಗಲೇ ಜಾರಿಗೊಳಿಸಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಉದ್ದಿಮೆ ಮತ್ತು ವ್ಯಾಪಾರಿ ಸಾಲ ಸೌಲಭ್ಯವನ್ನು ಪರಿಚಯಿಸುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT