ಮಂಗಳವಾರ, ಡಿಸೆಂಬರ್ 7, 2021
24 °C

ಜಿಯೊಫೋನ್‌ ನೆಕ್ಸ್ಟ್‌ಗೆ ಬರಲಿದೆ ‘ಪ್ರಗತಿ ಒಎಸ್‌’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಿಯೊ ಕಂಪನಿಯು ಸೋಮವಾರ ಬಿಡುಗಡೆ ಮಾಡಿರುವ ವಿಡಿಯೊದ ಪ್ರಕಾರ, ಜಿಯೊ ಪ್ಲಾಟ್‌ಫಾರಂ ಮತ್ತು ಗೂಗಲ್‌ ಕಂಪನಿ ಜೊತೆಯಾಗಿ ಜಿಯೊಫೋನ್‌ ನೆಕ್ಸ್ಟ್‌ಗೆ ‘ಪ್ರಗತಿ ಒಎಸ್‌’ ಅಭಿವೃದ್ಧಿಪಡಿಸಿವೆ. ದೀಪಾವಳಿಗೆ ವೇಳೆಗೆ ಈ ಫೋನ್‌ ಬಿಡುಗಡೆ ಆಗುವ ನಿರೀಕ್ಷೆ ಇದೆ.

‘ಪ್ರಗತಿ ಓಎಸ್’ ಆಂಡ್ರಾಯ್ಡ್‌ನಿಂದ ಚಾಲಿತವಾಗಿದೆ. ಜಿಯೊ ಮತ್ತು ಗೂಗಲ್‌ನಲ್ಲಿ ಇರುವ ಉತ್ತಮ ಮನಸ್ಸುಗಳನ್ನು ಒಟ್ಟುಗೂಡಿಸುವ ಉತ್ಸಾಹಭರಿತ ಪ್ರಯತ್ನದ ಫಲಿತಾಂಶ ಇದಾಗಿದೆ ಎಂದು ಆಂಡ್ರಾಯ್ಡ್‌ನ ಪ್ರಧಾನ ವ್ಯವಸ್ಥಾಪಕ ರಾಮ್‌ ಪಾಪಟ್ಲಾ ಹೇಳಿದ್ದಾರೆ.

ಹತ್ತು ಭಾರತೀಯ ಭಾಷೆಗಳಿಗೆ ಅನುವಾದ ಮಾಡಬಲ್ಲ ವೈಶಿಷ್ಟ್ಯವನ್ನು ಜಿಯೊಫೋನ್‌ ನೆಕ್ಸ್ಟ್‌ ಹೊಂದಿರಲಿದೆ. ರಿಲಯನ್ಸ್‌ ಸಮೂಹದ ನಿಯೋಲಿಂಕ್‌ ಕಂಪನಿಯು ತಿರುಪತಿ ಮತ್ತು ಶ್ರೀಪೆರಂಬದೂರಿನಲ್ಲಿ ತಯಾರಿಸಲಿರುವ ಕ್ವಾಲ್ಕಂ ಪ್ರೊಸೆಸರ್‌ ಅನ್ನು ಈ ಫೋನ್‌ ಹೊಂದಿರಲಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು