ಶುಕ್ರವಾರ, ಫೆಬ್ರವರಿ 26, 2021
29 °C

ಜಿಯೋ ಹೊಸ ಪ್ಲ್ಯಾನ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್‌ ಜಿಯೊ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಟಾಪ್‌–ಅಪ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.  ಮನೆಯಿಂದ ಕೆಲಸ ಡುತ್ತಿರುವವರಿಗಾಗಿ ‘ನ್ಯೂ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್’ ನೀಡಿದೆ.

ಕಡಿಮೆ ದರದಲ್ಲಿ ಶೇ 75ರವರೆಗೂ ಹೆಚ್ಚುವರಿ ಡೇಟಾ ಬಳಕೆ ಸಾಧ್ಯವಾಗಲಿದೆ. ವರ್ಷದ ರಿಚಾರ್ಜ್‌ ಪ್ಲ್ಯಾನ್‌ ಪ್ರತಿಸ್ಪರ್ಧಿ ಕಂಪನಿಗಳಿಗೆ ಹೋಲಿಸಿದರೆ ಶೇ 33ರಷ್ಟು ಅಗ್ಗವಾಗಲಿದೆ ಎಂದೂ ಹೇಳಿದೆ. 

ಹೊಸ ಪ್ಲ್ಯಾನ್‌ಗಳು: ₹151 (30 ಜಿಬಿ), ₹201 (40 ಜಿಬಿ), ₹251 (50ಜಿಬಿ). ಹೊಸ ಪ್ಲಾನ್‌ನಲ್ಲಿ ಪ್ರತಿ ಜಿಬಿಯ ಸರಾಸರಿ ಮೊತ್ತವು ₹ 5 ಆಗಲಿದೆ. ಹಾಲಿ ಇರುವ ಟಾಪ್‌–ಅಪ್‌ ಪ್ಲಾನ್‌ಗಳಲ್ಲಿ ಡೇಟಾ ದರವು ಪ್ರತಿ ಜಿಬಿಗೆ ₹ 8.5 ರಿಂದ ₹21ರವರೆ ಇದೆ ಎಂದು ಹೇಳಿದೆ. 

ವರ್ಷದ ಪ್ಲಾನ್‌ನಲ್ಲಿಯೂ ಪರಿಷ್ಕರಣೆ ಮಾಡಿದ್ದು,  ₹2,399ಕ್ಕೆ ದಿನದ ಡೇಟಾ ಬಳಕೆ ಮಿತಿಯನ್ನು 2ಜಿಬಿಗೆ ನಿಗದಿಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು