ಶುಕ್ರವಾರ, ಜನವರಿ 21, 2022
30 °C

Reliance Jio | ಕರೆ, ಡೇಟಾ ಶುಲ್ಕ ಹೆಚ್ಚಳ: ಡಿಸೆಂಬರ್‌ 1ರಿಂದ ಹೊಸ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಬಳಿಕ ಇದೀಗ ಜಿಯೊ ಕಂಪ‍ನಿ ತನ್ನ ಪ್ರಿಪೇಯ್ಡ್‌ ಸೇವೆಗಳ ಮೇಲಿನ ಶುಲ್ಕವನ್ನು ಶೇ 21ರವರೆಗೆ ಹೆಚ್ಚಿಸುವ ನಿರ್ಧಾರವನ್ನು ಭಾನುವಾರ ಘೋಷಿಸಿದೆ. ಡಿಸೆಂಬರ್‌ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿವೆ ಎಂದು ತಿಳಿಸಿದೆ. 

ಜಿಯೊಫೋನ್‌ ಯೋಜನೆ, ಅನಿಯಮಿತ ಯೋಜನೆ ಮತ್ತು ಡೇಟಾ ಆ್ಯಡ್‌ಆನ್‌ ಮೇಲಿನ ಶುಲ್ಕಗಳನ್ನು ಶೇ 19.6 ರಿಂದ ಶೇ 21.3ರವರೆಗೂ ಏರಿಕೆ ಮಾಡಲಾಗಿದೆ.

ಈ ಹೊಸ ಅನಿಯಮಿತ ಯೋಜನೆಗಳು ಉದ್ಯಮದಲ್ಲಿ ಉತ್ತಮ ಮೌಲ್ಯ ತಂದುಕೊಡಲಿವೆ. ಜಾಗತಿಕವಾಗಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುವ ಕಂಪನಿಯ ಬದ್ಧತೆಯನ್ನು ಇದು ಎತ್ತಿಹಿಡಿಯಲಿದೆ ಎಂದು ತಿಳಿಸಿದೆ.

ವಾರದ ಹಿಂದಷ್ಟೇ ಏರ್‌ಟೆಲ್ ಮತ್ತು ವೊಡಾಫೋನ್ ಪ್ರಿಪೇಯ್ಡ್ ಡೇಟಾ ಮತ್ತು ಕರೆ ದರ ಏರಿಕೆಯಾಗಿತ್ತು.


ಡಿಸೆಂಬರ್‌ 1ರಿಂದ ಪರಿಷ್ಕೃತ ದರ ಜಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು