ಮಂಗಳವಾರ, ಅಕ್ಟೋಬರ್ 27, 2020
28 °C

ಜೋಯಾಲುಕ್ಕಾಸ್‌ ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಚಿನ್ನಾಭರಣಗಳ ವ್ಯಾಪಾರಿಗಳಾದ ಜೋಯಾಲುಕ್ಕಾಸ್‌ ಸಮೂಹದ ಇತಿಹಾಸವನ್ನು ದಾಖಲಿಸುವ ‘ಎ ಗ್ಲಿಟರಿಂಗ್‌ ಸಕ್ಸೆಸ್‌ ಸ್ಟೋರಿ’ ಕಾಫಿ ಟೇಬಲ್‌ ಪುಸ್ತಕವನ್ನು ದುಬೈನಲ್ಲಿ ಬಿಡುಗಡೆ ಮಾಡಲಾಯಿತು.

ಭಾರತೀಯ ರಾಯಭಾರ ಕಚೇರಿಯ ಕಾನ್ಸುಲೇಟ್‌ ಜನರಲ್‌ ಡಾ. ಅಮನ್‌ ಪುರಿ ಪುಸ್ತಕ ಅನಾವರಣ ಮಾಡಿದರು. ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜಾಯ್‌ ಅಲುಕ್ಕಾಸ್‌ ಅವರು ಅಮನ್‌ ಪುರಿ ಅವರಿಗೆ ಮೊದಲ ಪ್ರತಿಯನ್ನು ನೀಡಿದರು. ಸಮೂಹದ ಸ್ಥಾಪಕ ಜಾಯ್‌ ಅಲುಕ್ಕಾಸ್‌ ಅವರ ತಂದೆ ಅಲುಕ್ಕಾ ಜೋಸೆಫ್‌ ವರ್ಗೀಸ್‌ ಅವರಿಗೆ ಈ ಕೃತಿ ಸಮರ್ಪಿಸಲಾಗಿದೆ.

‘1987ರಲ್ಲಿ ಯುಎಇನಲ್ಲಿ ಮೊದಲ ಆಭರಣ ಮಳಿಗೆ ಆರಂಭವಾಯಿತು. ಇಂದು ನಾವು ವಿಶ್ವದ 11 ದೇಶಗಳಲ್ಲಿ ಹರಡಿರುವ ಅಂತರರಾಷ್ಟ್ರೀಯ ಬ್ರ್ಯಾಂಡ್‌ ಆಗಿ ಬೆಳೆದಿದ್ದೇವೆ’ ಎಂದು ಜಾಯ್‌ ಅಲುಕ್ಕಾಸ್‌ ಹೇಳಿದರು.

ಜಾಯ್‌ ಅಲುಕ್ಕಾಸ್‌ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಜಾನ್‌ಪಾಲ್‌ ಅಲುಕ್ಕಾಸ್‌, ಜಾಸ್ಸಿಮ್‌ ಮೊಹಮ್ಮದ್ ಇಬ್ರಾಹಿಂ ಅಲ್‌ ಹಸಾವಿ ಅಲ್ತಾಮಿ ಮತ್ತು ಮುಸ್ತಾಫಾ ಮೊಹಮ್ಮದ್ ಅಹ್ಮದ್‌ ಅಲ್‌ ಶರೀಫ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು