ಬೆಂಗಳೂರು: ದೇಶದ ಪ್ರಸಿದ್ಧ ಆಭರಣಗಳ ಬ್ರ್ಯಾಂಡ್ ಜೋಯಾಲುಕ್ಕಾಸ್ ‘ಚೈನ್ ಫೆಸ್ಟ್’ ಕೊಡುಗೆ ಆರಂಭಿಸಿದೆ.
ಈ ಕೊಡುಗೆಯ ಭಾಗವಾಗಿ ವಿವಿಧ ರೀತಿಯ ಸರಗಳಿಗೆ ಶೇ 4.99ರಷ್ಟು ಮಜೂರಿ ಆಫರ್ ನೀಡಿದೆ. ಸೆಪ್ಟೆಂಬರ್ 20ರಿಂದ ಈ ಕೊಡುಗೆ ಆರಂಭವಾಗಿದ್ದು, ಅಕ್ಟೋಬರ್ 6ರ ವರೆಗೆ ಇರಲಿದೆ. ಗ್ರಾಹಕರು ಹತ್ತಿರದ ಮಳಿಗೆಗೆ ಭೇಟಿ ನೀಡಿ ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಜೋಯಾಲುಕ್ಕಾಸ್ ತಿಳಿಸಿದೆ.
‘ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಉತ್ತಮ ಆಭರಣಗಳನ್ನು ಒದಗಿಸುವುದೇ ನಮ್ಮ ಗುರಿಯಾಗಿದೆ. ಆಭರಣ ಪ್ರಿಯರಿಗಾಗಿ ಸರಗಳನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಜೋಯಾಲುಕ್ಕಾಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೋಯ್ ಆಲುಕ್ಕಾಸ್ ತಿಳಿಸಿದ್ದಾರೆ.