ಬೆಂಗಳೂರು: ಸಂವಹನ ಸಂಪರ್ಕದ ಕೊರತೆ ಎದುರಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಗಾಜನೂರು, ಚಾಮರಾಜನಗರ ಜಿಲ್ಲೆಯ ಪೆದ್ದನಪಾಳ್ಯ, ಹೂಗ್ಯಂ ಗ್ರಾಮದಲ್ಲಿ ದೇಶದ ಪ್ರಮುಖ ದೂರಸಂಪರ್ಕ ಕಂಪನಿ ಜಿಯೊ ಸಂವಹನ ಸಂಪರ್ಕ ಸೌಲಭ್ಯ ಕಲ್ಪಿಸಿದೆ.
ಪರಿಸರ ಮತ್ತು ಭೌಗೋಳಿಕ ಸವಾಲುಗಳನ್ನು ದಾಟುವ ಮೂಲಕ ಜಿಯೊ 4ಜಿ ಮತ್ತು 5ಜಿ ನೆಟ್‌ವರ್ಕ್ ಅನ್ನು ರಾಜ್ಯದಾದ್ಯಂತ 322ಕ್ಕೂ ಹೆಚ್ಚು ತಾಲ್ಲೂಕುಗಳಿಗೆ ವಿಸ್ತರಿಸಿದೆ. ಈ ತಾಲ್ಲೂಕುಗಳಲ್ಲಿ ಇರುವ ಅನೇಕ ಹಳ್ಳಿಗಳು ಈಗ ಜಿಯೊ ನೆಟ್‌ವರ್ಕ್‌ನಿಂದ ಪ್ರಯೋಜನ ಪಡೆಯುತ್ತಿವೆ ಎಂದು ಕಂಪನಿ ತಿಳಿಸಿದೆ.
ಈ ಪ್ರದೇಶಗಳಲ್ಲಿ ವಾಸವಿರುವ ಮಕ್ಕಳ ಶೈಕ್ಷಣಿಕ ಪ್ರಗತಿಯ ಉದ್ದೇಶಕ್ಕೆ ಈಗ ನೆಟ್‌ವರ್ಕ್‌ಗಾಗಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡಬೇಕು ಎಂಬ ಪರಿಸ್ಥಿತಿ ಇಲ್ಲ. ಯುವಜನರಿಗೆ ವರ್ಕ್ ಫ್ರಮ್ ಹೋಮ್ ಮಾಡುವುದಕ್ಕೂ ಅನುಕೂಲವಾಗಲಿದೆ. ಇದರಿಂದ ಅವಕಾಶಗಳು ತೆರೆದುಕೊಂಡಿವೆ ಎಂದು ಹೇಳಿದೆ.
ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಆನ್‌ಲೈನ್ ಸೇವೆ ಪಡೆದುಕೊಳ್ಳುವುದಕ್ಕೆ ದೊಡ್ಡಮಟ್ಟದ ಸುಧಾರಣೆಯಾಗಿದೆ. ಜೊತೆಗೆ, ಸಂವಹನ ನಡೆಸುವುದಕ್ಕೂ ಈಗ ಯಾವುದೇ ತೊಂದರೆಗಳಿಲ್ಲ ಎಂದು ತಿಳಿಸಿದೆ.
ಜಿಯೊದ ಪ್ರೀಮಿಯಂ ಅಪ್ಲಿಕೇಷನ್‌ಗಳಾದ ಜಿಯೊ ಟಿ.ವಿ ಮತ್ತು ಜಿಯೊ ಸಿನಿಮಾದಿಂದ ಮನರಂಜನೆ ಪಡೆಯಬಹುದಾಗಿದೆ. ಜಿಯೊದ ಸಿಮ್ ಕಾರ್ಡ್‌ಗಳು ರಾಜ್ಯದಾದ್ಯಂತ ಸುಲಭವಾಗಿ ದೊರೆಯುತ್ತಿವೆ. ಇನ್ನು ಸರಳ ಮತ್ತು ಅನುಕೂಲಕರ ಸೇರ್ಪಡೆಯೂ ಸಾಧ್ಯವಿದೆ. ತುಂಬ ಸರಳವಾದ ಪ್ರಕ್ರಿಯೆಯನ್ನು ಅನುಸರಿಸಿ, ಜಿಯೊ ಚಂದಾದಾರರಾಗಬಹುದು ಎಂದು ಹೇಳಿದೆ.