ಮಂಗಳೂರು: ಬ್ಯಾಂಕಿನ ಗ್ರಾಹಕರಿಗೆ ಸೇವೆ ಒದಗಿಸುವ ಸಂಪರ್ಕ ಕೇಂದ್ರದ ನಿರ್ವಹಣೆಗಾಗಿ ಕರ್ಣಾಟಕ ಬ್ಯಾಂಕ್, ಕಾರ್ವಿ ಡಿಜಿ ಕನೆಕ್ಟ್ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ.
ನಗರದ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಶನಿವಾರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಹಾಗೂ ಕಾರ್ವಿ ಡಿಜಿ ಕನೆಕ್ಟ್‌ನ ಸಿಇಒ ಮುಖೇಶ್ ಶಂಕರನ್ ಅವರು ಒಡಂಬಡಿಕೆಗೆ ಸಹಿ ಹಾಕಿದರು.
‘ಗ್ರಾಹಕರು ಹಾಗೂ ಬ್ಯಾಂಕ್ ನಡುವಿನ ಪರಿಣಾಮಕಾರಿ ಸಂವಹನಕ್ಕಾಗಿ ಕರ್ಣಾಟಕ ಬ್ಯಾಂಕ್, ಕಾರ್ವಿ ಡಿಜಿ ಕನೆಕ್ಟ್ ಜತೆಗೆ ಒಡಂಬಡಿಕೆ
ಮಾಡಿಕೊಂಡಿದೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ 24 ಗಂಟೆಗಳ ನಿರಂತರ ಸೇವೆಯನ್ನು ಸುಗಮವಾಗಿ ಒದಗಿಸಲು ಇದರಿಂದ ಅನುಕೂಲ ಆಗಲಿದೆ’ ಎಂದು ಮಹಾಬಲೇಶ್ವರ ಎಂ.ಎಸ್. ತಿಳಿಸಿದರು.
‘ಬಹು ವಿಧದ ಹಾಗೂ ಬಹು ಭಾಷೆಯ ಸಂಪರ್ಕ ಕೇಂದ್ರವು, ಗ್ರಾಹಕರೊಂದಿಗೆ ಬ್ಯಾಂಕಿನ ಸಂಬಂಧವನ್ನು ಸುಧಾರಿಸಲು ಸಹಕಾರಿಯಾಗಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.