ಸೋಮವಾರ, ನವೆಂಬರ್ 30, 2020
27 °C

ಕರ್ಣಾಟಕ ಬ್ಯಾಂಕ್‌ ಪ್ರಿಪೇಯ್ಡ್ ಕಾರ್ಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರಿನಲ್ಲಿ ಸೋಮವಾರ ಎನ್‌ಸಿಎಂಸಿ ಅನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌. ಬಿಡುಗಡೆ ಮಾಡಿದರು.

ಮಂಗಳೂರು: ಕೇಂದ್ರ ಸರ್ಕಾರದ ಆಶಯದಂತೆ ‘ನ್ಯಾಷನಲ್ ಕಾಮನ್ ಮೊಬಿಲಿಟಿ ಡೆಬಿಟ್ ಕಾರ್ಡ್’ಅನ್ನು (ಎನ್‌ಸಿಎಂಸಿ) ಕರ್ಣಾಟಕ ಬ್ಯಾಂಕ್ ಸೋಮವಾರ ಬಿಡುಗಡೆ ಮಾಡಿದೆ.

ಇದು ಜಗತ್ತಿನಾದ್ಯಂತ ಬಳಸಬಹುದಾದ ಸ್ಪರ್ಶ ರಹಿತ, ಡೆಬಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್. ‘ಒಂದು ದೇಶ, ಒಂದು ಕಾರ್ಡ್’ ಎನ್ನುವ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ರೂಪುಗೊಂಡಿರುವ ಈ ಕಾರ್ಡನ್ನು ಸ್ವೈಪ್ ಮಾಡದೇ ಬಳಸಬಹುದು. ಟೋಲ್ ಪ್ಲಾಜಾ, ಮೆಟ್ರೋ ನಿಲ್ದಾಣ, ಪಾರ್ಕಿಂಗ್ ಜಾಗಗಳಲ್ಲಿ, ಮಳಿಗೆಗಳಲ್ಲಿ ಬಳಸಬಹುದು. ಚಿಪ್ ಆಧಾರಿತ ಈ ಕಾರ್ಡ್ ಬಳಸಿ ಇಂಟರ್‌ನೆಟ್ ಬಳಕೆ ಇಲ್ಲದೆಯೇ ಸಣ್ಣಪುಟ್ಟ ವ್ಯವಹಾರಗಳನ್ನು ಮಾಡಬಹುದು.

ಕಾರ್ಡ್ ಬಿಡುಗಡೆ ಮಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್., ‘ಬದಲಾಗುತ್ತಿರುವ ಬ್ಯಾಂಕಿಂಗ್ ಪರಿಭಾಷೆಗೆ ಈ ಕಾರ್ಡ್‌ ಪೂರಕವಾಗಿದೆ. ಈ ಡೆಬಿಟ್ ಕಾರ್ಡ್‌ನ ಸೌಲಭ್ಯಗಳಾದ ‘ಟ್ಯಾಪ್ ಆಂಡ್ ಗೋ’ ಮತ್ತು ‘ಆಫ್‌ಲೈನ್ ಪೇಮೆಂಟ್’ನಂತಹ ಸೌಲಭ್ಯಗಳು ಜನರಿಗೆ ಆಕರ್ಷಕ ಎನಿಸುತ್ತವೆ. ನೂತನ ಉಪಕ್ರಮಗಳು ಬ್ಯಾಂಕಿಂಗ್ ವ್ಯವಹಾರದ ಪರಿಪೂರ್ಣ ಡಿಜಿಟಲೀಕರಣಕ್ಕೆ ಪೂರಕವಾಗಲಿವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು