ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ಣಾಟಕ ಬ್ಯಾಂಕ್‌ ಲಾಭ ಶೇ 23ರಷ್ಟು ಕುಸಿತ

Published 24 ಮೇ 2024, 13:44 IST
Last Updated 24 ಮೇ 2024, 13:44 IST
ಅಕ್ಷರ ಗಾತ್ರ

ನವದೆಹಲಿ: ಕರ್ಣಾಟಕ ಬ್ಯಾಂಕ್‌ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹274 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹354 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 23ರಷ್ಟು ಇಳಿಕೆಯಾಗಿದೆ. ವೇತನ ಹೆಚ್ಚಳದಿಂದಾಗಿ ಲಾಭದ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಬ್ಯಾಂಕ್‌, ಷೇರುಪೇಟೆಗೆ ತಿಳಿಸಿದೆ.

ಒಟ್ಟು ವರಮಾನವು ₹2,365 ಕೋಟಿಯಿಂದ ₹2,620 ಕೋಟಿಗೆ ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ವರಮಾನವು ₹860 ಕೋಟಿಯಿಂದ ₹834 ಕೋಟಿಗೆ ಇಳಿದಿದೆ. 

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಶೇ 3.74ರಿಂದ ಶೇ 3.53ಕ್ಕೆ ತಗ್ಗಿದೆ. ನಿವ್ವಳ ಎನ್‌ಪಿಎ ಶೇ 1.70ರಿಂದ ಶೇ 1.58ಕ್ಕೆ ಇಳಿದಿದೆ. ಬಂಡವಾಳ ಪರ್ಯಾಪ್ತತಾ ಅನುಪಾತದಲ್ಲಿ (ಸಿಆರ್‌ಎಆರ್‌) ಸುಧಾರಣೆಯಾಗಿದ್ದು, ಶೇ 17.45ರಿಂದ ಶೇ 18ಕ್ಕೆ ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT