ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಶಾಖೆ ಆರಂಭಿಸಿದ ಕರೂರ್‌ ವೈಶ್ಯ ಬ್ಯಾಂಕ್‌

Published 4 ಫೆಬ್ರುವರಿ 2024, 13:34 IST
Last Updated 4 ಫೆಬ್ರುವರಿ 2024, 13:34 IST
ಅಕ್ಷರ ಗಾತ್ರ

ಚೆನ್ನೈ: ಖಾಸಗಿ ವಲಯದ ಕರೂರ್‌ ವೈಶ್ಯ ಬ್ಯಾಂಕ್‌ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ತನ್ನ ನೂತನ ಶಾಖೆಗಳನ್ನು ಆರಂಭಿಸಿದೆ.

ಮಧುರೈನ ಉಸಿಲಾಂಪಟ್ಟಿ ಮತ್ತು ಚೆನ್ನೈ ಬಳಿಯ ಮಾಥುರ್ ಹಾಗೂ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಆತ್ಮಕೂರಲ್ಲಿ ಹೊಸ ಶಾಖೆಗಳನ್ನು ಉದ್ಘಾಟಿಸಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಈ ಹೊಸ ಶಾಖೆಗಳ ಉದ್ಘಾಟನೆಯೊಂದಿಗೆ ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆ 834ಕ್ಕೇರಿದೆ. 2023ರ ಡಿಸೆಂಬರ್‌ 31ಕ್ಕೆ ಬ್ಯಾಂಕ್‌ನ ಒಟ್ಟು ವಹಿವಾಟು ₹1.58 ಲಕ್ಷ ಕೋಟಿಯಾಗಿದ್ದು, ಡಿಸೆಂಬರ್ ತ್ರೈಮಾಸಿಕದಲ್ಲಿ ₹412 ಕೋಟಿ ನಿವ್ವಳ ಲಾಭ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT