ಭಾನುವಾರ, ಆಗಸ್ಟ್ 1, 2021
26 °C

ಖಾದಿ ಮುಖಗವಸು; ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) ತಯಾರಿಸಿರುವ ಹತ್ತಿ ಮತ್ತು ರೇಷ್ಮೆಯ ಬಟ್ಟೆಯ ಮುಖಗವಸುಗಳನ್ನು ಗ್ರಾಹಕರು ಈಗ ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಖಾದಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಲು ಸಾಧ್ಯವಾಗದವರ ಅನುಕೂಲಕ್ಕಾಗಿ ಈ ಮುಖಗವಸುಗಳು ಆಯೋಗದ ಆನ್‌ಲೈನ್‌ ತಾಣದಲ್ಲಿ (https://www.kviconline.gov.in/khadimask ) ಖರೀದಿಗೆ ಲಭ್ಯ ಇವೆ.

‘ಹತ್ತಿ ಬಟ್ಟೆಯ ಪ್ರತಿ ಮುಖಗವಸಿಗೆ ₹ 30 ಮತ್ತು ರೇಷ್ಮೆಯ ಮುಖಗವಸಿಗೆ ₹ 100 ಬೆಲೆ ನಿಗದಿಪಡಿಸಲಾಗಿದೆ. ಕನಿಷ್ಠ ಖರೀದಿ  ಮಿತಿಯನ್ನು ₹ 500ಕ್ಕೆ ನಿಗದಿಪಡಿಸಲಾಗಿದೆ. ಖರೀದಿಸಿದ 5 ದಿನಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು. ದೇಶದ ಯಾವುದೇ ಭಾಗದಲ್ಲಿ ಪೂರೈಸಲಾಗುವುದು. ಪ್ರಿಂಟೆಡ್‌ ರೇಷ್ಮೆ ಸೇರಿ ನಾಲ್ಕು ಬಗೆಯ ಮುಖಗವಸುಗಳು ಮಾರಾಟಕ್ಕೆ ಇವೆ’ ಎಂದು ಆಯೋಗದ ಅಧ್ಯಕ್ಷ ವಿ. ಕೆ. ಸಕ್ಸೇನಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು