ಎಲೆಕ್ಟ್ರಾನಿಕ್ಸ್ ಉಪಕರಣಗಳ ಪ್ರಮುಖ ತಯಾರಿಕಾ ಸಂಸ್ಥೆ ಎಲ್ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ (ಎಲ್ಜಿಇಐಎಲ್) ಷೇರಿನ ಬೆಲೆ ₹1,800ಕ್ಕೆ ತಲುಪಲಿದೆ ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ಜಾಗತಿಕ ತಂತ್ರಗಾರಿಕೆಯ ಭಾಗವಾಗಿ ಕಂಪನಿಯು ಪ್ರೀಮಿಯಂ ಗುಣಮಟ್ಟದ ಉಪಕರಣಗಳು ಮತ್ತು ಹೆಚ್ಚಿನ ಜನರು ಬಳಸುವ ಉಪಕರಣಗಳ ನಡುವೆ ಸಮತೋಲನ ಸಾಧಿಸಲು ಯೋಜಿಸಿದೆ. ಜೊತೆಗೆ ಈ ಉತ್ಪನ್ನಗಳನ್ನು ಕೈಗೆಟಕುವಂತೆ ಮಾಡಲು ಗುರಿ ಹೊಂದಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯ ಉತ್ಪನ್ನಗಳ ರಫ್ತು ಶೇ 6ರಷ್ಟಿತ್ತು. 2027–28ರ ವೇಳೆಗೆ ಶೇ 10ಕ್ಕೆ ಹೆಚ್ಚಿಸಲು ಕಂಪನಿ ಗುರಿ ಹೊಂದಿದೆ.

ಉದ್ದಿಮೆಯಿಂದ ಉದ್ದಿಮೆ (ಬಿ2ಬಿ) ವಹಿವಾಟಿನ ವರಮಾನ ಶೇ 14ರಿಂದ ಶೇ 15ರಷ್ಟಾಗಲಿದೆ. ಇದು ಉದ್ದಿಮೆಯಿಂದ ಗ್ರಾಹಕ (ಬಿ2ಸಿ) ವಹಿವಾಟಿನಲ್ಲಿನ ಲಾಭಕ್ಕಿಂತಲೂ ಅಧಿಕ.

2024–25ರ ಆರ್ಥಿಕ ವರ್ಷದಿಂದ 2027–28ರವರೆಗಿನ ಅವಧಿಯಲ್ಲಿ ತೆರಿಗೆ ನಂತರದ ಲಾಭದ ಬೆಳವಣಿಗೆ ದರವು (ಸಿಎಜಿಆರ್) ಶೇ 12ರಷ್ಟಿರುವ ನಿರೀಕ್ಷೆ ಇದೆ ಎಂದು ಮೋತಿಲಾಲ್ ಓಸ್ವಾಲ್ ತಿಳಿಸಿದೆ.

ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಷೇರಿನ ಮೌಲ್ಯ ₹1,686.50 ಇತ್ತು.

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ವೆಬ್ಸೈಟ್ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.