ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌ಐಸಿ: ₹13,763 ಕೋಟಿ ಲಾಭ

Published 27 ಮೇ 2024, 15:51 IST
Last Updated 27 ಮೇ 2024, 15:51 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹13,763 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ರ ಇದೇ ಅವಧಿಯಲ್ಲಿ ನಿಗಮವು ₹13,428 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 2ರಷ್ಟು ಏರಿಕೆಯಾಗಿದೆ. ವರಮಾನವು ₹2 ಲಕ್ಷ ಕೋಟಿಯಿಂದ ₹2.50 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ನಿಗಮವು ಷೇರುಪೇಟೆಗೆ ಸೋಮವಾರ ತಿಳಿಸಿದೆ.

ಮೊದಲ ವರ್ಷದ ಎಲ್‌ಐಸಿ ಕಂತು ತುಂಬುವಿಕೆ ವರಮಾನದಲ್ಲಿ ಸುಧಾರಣೆಯಾಗಿದ್ದು, ₹12,811 ಕೋಟಿಯಿಂದ ₹13,810 ಕೋಟಿಗೆ ಏರಿಕೆಯಾಗಿದೆ. ನವೀಕರಿಸಿದ ಪ್ರೀಮಿಯಂ ಮೂಲಕ ಗಳಿಸಿದ ವರಮಾನವು ₹76,009 ಕೋಟಿಯಿಂದ ₹77,368 ಕೋಟಿಗೆ ಹೆಚ್ಚಳವಾಗಿದೆ.

2023–24ರ ಪೂರ್ಣ ಹಣಕಾಸು ವರ್ಷದಲ್ಲಿ ನಿಗಮದ ಲಾಭವು ₹40,676 ಕೋಟಿಗೆ ಏರಿಕೆಯಾಗಿದೆ. ಹಿಂದಿನ ಇದೇ ಅವಧಿಯಲ್ಲಿ ₹36,397 ಕೋಟಿ ಲಾಭ ಗಳಿಸಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT