ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಮೂಹ: ಲಾಭಕ್ಕೆ ಮರಳಿದ ಎಲ್‌ಐಸಿ ಹೂಡಿಕೆ

Last Updated 3 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಸಮೂಹದಲ್ಲಿ ಮಾಡಿದ್ದ ಹೂಡಿಕೆಗಳು ಮತ್ತೆ ಲಾಭದ ಹಳಿಗೆ ಬಂದಿವೆ. ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯವು ಮೂರು ದಿನಗಳಿಂದ ಏರುಗತಿಯಲ್ಲಿ ಇರುವ ಕಾರಣದಿಂದಾಗಿ ಎಲ್‌ಐಸಿಯ ಹೂಡಿಕೆಗಳು ಲಾಭಕ್ಕೆ ತಿರುಗಿವೆ.

ಅದಾನಿ ಸಮೂಹದ, ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ 10 ಕಂಪನಿಗಳ ಪೈಕಿ ಏಳು ಕಂಪನಿಗಳಲ್ಲಿ ಎಲ್‌ಐಸಿ ಹೂಡಿಕೆ ಮಾಡಿದೆ. ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ನಿರ್ದಿಷ್ಟ ಆರೋಪಗಳನ್ನು ಹೊರಿಸಿದ ನಂತರದಲ್ಲಿ, ಸಮೂಹದ ಕಂಪನಿಗಳಲ್ಲಿ ಎಲ್‌ಐಸಿ ಮಾಡಿದ್ದ ಹೂಡಿಕೆಗಳು ನಷ್ಟಕ್ಕೆ ಒಳಗಾಗಿದ್ದವು.

ಎಲ್‌ಐಸಿಯು ಸಮೂಹದಲ್ಲಿ ಒಟ್ಟು ₹ 30,127 ಕೋಟಿ ಹೂಡಿಕೆ ಮಾಡಿದೆ. ಷೇರುಮೌಲ್ಯ ಕುಸಿತದ ನಂತರದಲ್ಲಿ, ಹೂಡಿಕೆ ಮೌಲ್ಯವು ಫೆಬ್ರುವರಿ 24ರ ಸುಮಾರಿಗೆ ₹ 29,893 ಕೋಟಿಗೆ ಇಳಿಕೆ ಆಗಿತ್ತು. ಆದರೆ, ಈಗ ಅದಾನಿ ಸಮೂಹದ ಕಂಪನಿಗಳ ಷೇರುಗಳಲ್ಲಿ ಕಂಡುಬಂದಿರುವ ಮೌಲ್ಯ ಹೆಚ್ಚಳವು, ಎಲ್‌ಐಸಿಯ ಹೂಡಿಕೆಯನ್ನು ಲಾಭಕ್ಕೆ ತಂದು ನಿಲ್ಲಿಸಿವೆ.

ಷೇರುಪೇಟೆಯ ಶುಕ್ರವಾರದ ವಹಿವಾಟಿನ ಕೊನೆಯಲ್ಲಿ, ಎಲ್‌ಐಸಿ ಹೂಡಿಕೆಯ ಮೌಲ್ಯವು ₹ 39,068 ಕೋಟಿಗೆ ತಲುಪಿದೆ. ಅದಾನಿ ಸಮೂಹದ ಷೇರುಗಳ ಮೌಲ್ಯವು ಕುಸಿತ ಕಂಡ ನಂತರದಲ್ಲಿ ಹಲವರು, ಆ ಕಂಪನಿಗಳಲ್ಲಿ ಹೂಡಿಕೆ ಮಾಡುವ ತೀರ್ಮಾನವನ್ನು ಎಲ್‌ಐಸಿ ಕೈಗೊಂಡಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳನ್ನು ಎತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT