ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಐಪಿಒ: ನವೆಂಬರ್‌ಗೆ ‘ಸೆಬಿ’ಗೆ ದಾಖಲೆ ಪತ್ರ

Last Updated 3 ಅಕ್ಟೋಬರ್ 2021, 12:02 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಪ್ರಕ್ರಿಯೆಯ ಭಾಗವಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ನವೆಂಬರ್‌ನಲ್ಲಿ ಪ್ರಾಥಮಿಕ ದಾಖಲೆ ಪತ್ರಗಳನ್ನು ಸಲ್ಲಿಸಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಐಪಿಒ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಐಪಿಒ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಕಳೆದ ತಿಂಗಳು 10 ಮರ್ಚೆಂಟ್‌ ಬ್ಯಾಂಕ್‌ಗಳನ್ನು ನೇಮಕ ಮಾಡಿದೆ. ಒಮ್ಮೆ ದಾಖಲೆಪತ್ರ ಸಲ್ಲಿಕೆ ಆದರೆ, ಹೂಡಿಕೆದಾರರನ್ನು ಆಕರ್ಷಿಸಲುಮರ್ಚೆಂಟ್‌ ಬ್ಯಾಂಕ್‌ಗಳು ಜನವರಿಯಲ್ಲಿ ಜಾಗತಿಕ ಮತ್ತು ದೇಶೀಯವಾಗಿ ರೋಡ್‌ಷೋ ನಡೆಸಲಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT