2023-24ನೆ ಹಣಕಾಸು ವರ್ಷ ಏಪ್ರಿಲ್ 1 ರಿಂದ ಆರಂಭವಾಗಿದ್ದು, ಹಲವು ಬದಲಾವಣೆಗಳು ಆಗಲಿವೆ. ಔಷಧಿ, ಗ್ಯಾಸ್ ಬೆಲೆ ಏರಿಕೆ, ಟೋಲ್ ದರ ಹೆಚ್ಚಳ, ಹೊಸ ಆದಾಯ ತೆರಿಗೆ ಪದ್ಧತಿ ಸೇರಿ ಹಲವು ಬದಲಾವಣೆಗಳು ಉಂಟಾಗಲಿವೆ.
ಏ.1 ರಿಂದ ಉಂಟಾಗುವ ಬದಲಾವಣೆಗಳು ಯಾವೆಲ್ಲಾ? ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
* 6 ಅಂಕೆಗಳ ಅಕ್ಷರಸಂಖ್ಯಾಯುಕ್ತ (alphanumeric) ಎಚ್‌ಯುಐಡಿ ಹೊಂದಿರುವ ಆಭರಣ ಹಾಗೂ ಕಲಾಕೃತಿಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯ.
* ಎಕ್ಸ್‌ಪ್ರೆಸ್‌ವೇ ಟೋಲ್ ದರ ಶೇ 3.5 ರಿಂದ ಶೇ 7 ರಷ್ಟು ಏರಿಕೆಯಾಗಲಿದೆ.
* ಸರ್ಕಾರೇತರ ವೇತನದಾರರ ರಜೆ ನಗದೀಕರಣ ಮೇಲಿನ ತೆರಿಗೆ ವಿನಾಯಿತಿ ₹ 3,00,000 ಲಕ್ಷದಿಂದ ₹ 25,00,000 ಕ್ಕೆ ಏರಿಕೆಯಾಗಲಿದೆ. 2023ರ ಬಜೆಟ್‌ನಲ್ಲಿ ಈ ಘೋಷಣೆಯಾಗಿತ್ತು.
* ₹ 2,000ಕ್ಕಿಂತ ಮೇಲ್ಪಟ್ಟ ಯುಪಿಐ ವಹಿವಾಟಿಗೆ ವ್ಯಾಪಾರಿಗಳಿಗೆ ಶೇ 1.1 ರಷ್ಟು ಕಾರ್ಯಸಾಧ್ಯತಾ ಶುಲ್ಕ ಅನ್ವಯವಾಗಲಿದೆ.
* ಆಮ್ಲಜನಕ ಔಷಧಗಳು, ನೋವುನಿವಾರಕಗಳು ಹಾಗೂ ಜೀವರಕ್ಷಕ ಔಷಧಿಗಳ ಬೆಲೆ ಏರಿಕೆಯಾಗಲಿವೆ.
* ಪೆಟ್ರೋಲಿಯಂ ಉತ್ಪನ್ನ ಸರಬರಾಜುದಾರರು ಹೊಸ ಆರ್ಥಿಕ ವರ್ಷಕ್ಕೆ ಬೆಲೆ ಪರಿಷ್ಕರಣೆ ಮಾಡುವುದರಿಂದ ಗ್ಯಾಸ್ ಬೆಲೆ ಏರಿಕೆಯಾಗಲಿದೆ. ವಾಣಿಜ್ಯ ಎಲ್‌ಪಿಜಿ ದರ ₹ 250ಗಿಂತ ಹೆಚ್ಚಳವಾಗುವ ಸಾಧ್ಯತೆ ಇದೆ.
* ಎಲ್ಲಾ ಹೊಸ ವಾಹನಗಳು ಬಿಎಸ್–6 ಶ್ರೇಣಿಯ ಎರಡನೇ ಹಂತದ ಹೊಗೆ ಹೊರಸೂಸುವಿಕೆ ಮಾನದಂಡವನ್ನು ಪಾಲಿಸುವುದು ಕಡ್ಡಾಯ.
* ಎಲ್ಲಾ ವೇತನದಾರರಿಗೆ ಹೊಸ ಆದಾಯ ತೆರಿಗೆ ಪದ್ಧತಿಯು ಡಿಫಾಲ್ಟ್ ತೆರಿಗೆ ಪದ್ಧತಿಯಾಗಿರಲಿದೆ.
* ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಮಿತಿ ₹ 30,00,000 ಲಕ್ಷಕ್ಕೆ ಏರಿಕೆಯಾಗಲಿದೆ.
* ವಾರ್ಷಿಕ 5 ಲಕ್ಷ ಪ್ರೀಮಿಯಂ ಹೊಂದಿರುವ ಜೀವ ವಿಮೆ ತೆರಿಗೆ ವ್ಯಾಪ್ತಿಗೆ ಒಳಪಡಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.