ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ಬುಕ್ಮಾಡಲು ಮಿಸ್ಡ್‌ ಕಾಲ್‌

Last Updated 1 ಜನವರಿ 2021, 20:37 IST
ಅಕ್ಷರ ಗಾತ್ರ

ಬೆಂಗಳೂರು: ಇಂಡೇನ್‌ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ ಗ್ರಾಹಕರು ಇನ್ನು ಮುಂದೆ 8454955555 ಸಂಖ್ಯೆಗೆ ಮಿಸ್ಡ್‌ ಕಾಲ್ ನೀಡುವ ಮೂಲಕ ಎಲ್‌ಪಿಜಿ ಸಿಲಿಂಡರ್ ಮರು ಪೂರಣಕ್ಕೆ ಬುಕ್ ಮಾಡಬಹುದು. ಈ ಸೌಲಭ್ಯಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಭುವನೇಶ್ವರದಲ್ಲಿ ಚಾಲನೆ ನೀಡಿದ್ದಾರೆ.

‘ಮಿಸ್ಡ್‌ ಕಾಲ್ ನೀಡಿ ಎಲ್‌ಪಿಜಿ ಮರುಪೂರಣಕ್ಕೆ ಬುಕ್ ಮಾಡುವ ಸೌಲಭ್ಯವು ಕರ್ನಾಟಕದಲ್ಲಿ ಕೂಡ ಈಗ ಜಾರಿಗೆ ಬಂದಿದೆ’ ಎಂದು ಇಂಡಿಯನ್ ಆಯಿಲ್ ಕಂಪನಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗ್ರಾಹಕರು 8454955555 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ, ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಹೆಸರು ನೋಂದಾಯಿಸಬಹುದು. ಈ ಸೌಲಭ್ಯ ಈಗ ಭುವನೇಶ್ವರದಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಣೆ ಆಗಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT