ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ತಯಾರಿಕಾ ಕೇಂದ್ರವಾಗಿ ಭಾರತ: ಕೈಗಾರಿಕಾ ಸಚಿವಾಲಯ ಕಾರ್ಯೋನ್ಮುಖ

Last Updated 4 ಮೇ 2020, 4:21 IST
ಅಕ್ಷರ ಗಾತ್ರ

ನವದೆಹಲಿ: ಭಾರಿ ಯಂತ್ರೋಪಕರಣ, ಚರ್ಮ ಮತ್ತು ರಾಸಾಯನಿಕ ಉತ್ಪನ್ನ ಒಳಗೊಂಡಂತೆ ಪ್ರಮುಖ ಸರಕುಗಳ ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ದೇಶಿ ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಕಾರ್ಯೋನ್ಮುಖವಾಗಿದೆ.

ಜಾಗತಿಕ ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಮುನ್ನಡೆ ಸಾಧಿಸಿ ಭಾರತವನ್ನು ಬಲಿಷ್ಠ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಕೈಗಾರಿಕಾ ಸಂಘಟನೆಗಳು ಮತ್ತು ಇತರ ಭಾಗಿದಾರರ ಜತೆ ಸಚಿವಾಲಯವು ಹಲವು ಸುತ್ತಿನ ಮಾತುಕತೆ ನಡೆಸಿದೆ.

ಈ ಉದ್ದೇಶಕ್ಕೆ 12 ಪ್ರಮುಖ ವಲಯಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಪೀಠೋಪಕರಣ, ಮಕ್ಕಳ ಆಟಿಕೆ, ಆಹಾರ ಸಂಸ್ಕರಣೆ, ಕೃಷಿ – ರಾಸಾಯನಿಕ ಉತ್ಪನ್ನ, ಕೃತಕ ನೂಲಿನ ಜವಳಿ, ಏರ್‌ ಕಂಡಿಷನರ್‌, ಭಾರಿ ಯಂತ್ರೋಪಕರಣ, ಔಷಧಿ ಮತ್ತು ವಾಹನ ಬಿಡಿಭಾಗ ತಯಾರಿಕೆ ವಲಯವು ಸೇರಿವೆ.

ಕೋವಿಡ್‌ ಬಿಕ್ಕಟ್ಟು ಕೊನೆಗೊಂಡ ನಂತರ ಜಾಗತಿಕ ಸರಕು ಪೂರೈಕೆ ವ್ಯವಸ್ಥೆಯಲ್ಲಿ ಎಲ್ಲರ ಅನುಭವಕ್ಕೆ ಬರುವ ಬದಲಾವಣೆಗಳು ಕಂಡು ಬರಲಿವೆ. ದೇಶಿ ಕೈಗಾರಿಕೆಗಳು ಮತ್ತು ರಫ್ತುದಾರರು ಜಾಗತಿಕ ಮಾರುಕಟ್ಟೆಯಲ್ಲಿ ಗಣನೀಯ ಪಾಲು ಹೊಂದುವ ನಿಟ್ಟಿನಲ್ಲಿ ದೇಶಿ ಉದ್ದಿಮೆ ಕಾರ್ಯಪ್ರವೃತ್ತವಾಗಬೇಕಾಗಿದೆ. ಈ ಉದ್ದೇಶಕ್ಕೆ ಹಲವಾರು ತಂಡ ಮತ್ತು ಉಪ ಸಮಿತಿಗಳನ್ನು ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT