ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್‌ ವಜ್ರಾಭರಣ ಮೇಲೆ ವಿಶೇಷ ರಿಯಾಯಿತಿ

Published 13 ಡಿಸೆಂಬರ್ 2023, 16:29 IST
Last Updated 13 ಡಿಸೆಂಬರ್ 2023, 16:29 IST
ಅಕ್ಷರ ಗಾತ್ರ

ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್ ಕಂಪನಿಯು ವಜ್ರಾಭರಣಗಳ ‘ಮೈನ್ ಡೈಮಂಡ್‌ ಉತ್ಸವ’ಕ್ಕೆ ಚಾಲನೆ ನೀಡಿದೆ.

ಉತ್ಸವದಲ್ಲಿ ತನ್ನ ಜನಪ್ರಿಯ ಉಪ ಬ್ರ್ಯಾಂಡ್ ಆಗಿರುವ ಮೈನ್ ಡೈಮಂಡ್ ಆಭರಣಗಳನ್ನು ಪ್ರದರ್ಶಿಸಿದೆ. ರಾಜ್ಯದಲ್ಲಿ ಇರುವ ತನ್ನ ಎಲ್ಲಾ ಸ್ಟೋರ್‌ಗಳಲ್ಲಿ ಆರಂಭಿಸಿರುವ ಈ ಉತ್ಸವವು ಜನವರಿ 14ರ ವರೆಗೆ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.

ಉತ್ಸವದ ಅಂಗವಾಗಿ ಡೈಮಂಡ್ಸ್‌ ಗ್ರಾಹಕರಿಗೆ ವಜ್ರದ ಮೌಲ್ಯದ ಮೇಲೆ ಶೇ 25ರ ವರೆಗೆ ರಿಯಾಯಿತಿ ಸೌಲಭ್ಯ ಕಲ್ಪಿಸಿದೆ. ಹಳೆಯ ಮೈನ್ ಡೈಮಂಡ್ ಆಭರಣಗಳ ವಿನಿಮಯದ ಮೇಲೆ ಶೇ 100ರಷ್ಟು ಮೌಲ್ಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.

‘ಉತ್ಸವದಲ್ಲಿ ಗ್ರಾಹಕರು ವೈವಿಧ್ಯಮಯ ಶ್ರೇಣಿಯಲ್ಲಿನ ಸಾಲಿಟೇರ್, ಪಾರ್ಟಿವೇರ್, ಕ್ಯಾಷುವಲ್ ಪಿಕ್ಸ್ ಮತ್ತು ಬ್ರೈಡಲ್ ಆಯ್ಕೆಗಳ ವಜ್ರಾಭರಣವನ್ನು ಖರೀದಿಸಬಹುದಾಗಿದೆ’ ಎಂದು ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ. ಅಹ್ಮದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT