ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯ ತಯಾರಿಕಾ ಚಟುವಟಿಕೆ ಅಲ್ಪ ಇಳಿಕೆ

Last Updated 1 ಮಾರ್ಚ್ 2021, 12:02 IST
ಅಕ್ಷರ ಗಾತ್ರ

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಫೆಬ್ರುವರಿಯಲ್ಲಿ ಅಲ್ಪ ಇಳಿಕೆ ಕಂಡಿವೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ತಿಳಿಸಿದೆ.

ಮ್ಯಾನುಫ್ಯಾಕ್ಷರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ ಜನವರಿಯಲ್ಲಿ 57.7ರಷ್ಟಿತ್ತು. ಇದು ಫೆಬ್ರುವರಿಯಲ್ಲಿ 57.5ಕ್ಕೆ ಅಲ್ಪ ಇಳಿಕೆ ಕಂಡಿದೆ. ಜನವರಿಯಿಂದ ಬೆಳವಣಿಗೆಯ ವೇಗ ಕಡಿಮೆ ಆಗಿದ್ದರೂ ಸಕಾರಾತ್ಮಕ ಮಟ್ಟದಲ್ಲಿಯೇ ಇದೆ.

‘ಚಟುವಟಿಕೆಗಳು ಅಲ್ಪ ಇಳಿಕೆ ಕಂಡಿದ್ದರು ಸಹ ಹೊಸ ಯೋಜನೆಗಳಿಗೆ ಬೇಡಿಕೆ ಬರುತ್ತಿರುವುದರಿಂದ ಕಂಪನಿಗಳು ಉತ್ಪಾದನೆ ಮತ್ತು ಖರೀದಿ ಚಟುವಟಿಕೆಗಳನ್ನು ಹೆಚ್ಚಿಸುತ್ತಿವೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಆರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪಾಲಿಯಾನಾ ಡಿ. ಲಿಮಾ ತಿಳಿಸಿದ್ದಾರೆ.

‘ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಪಾಳಿಯ ಆಧಾರದ ಮೇಲೆ ಕೆಲಸ ಮಾಡಲು ನಿರ್ಬಂಧ ಇದೆ. ಹೀಗಾಗಿ ಉದ್ಯೋಗ ಸೃಷ್ಟಿಯು ಕಡಿಮೆಯಾಗಿದೆ. ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ವೇಗ ಸಿಗುತ್ತಿದ್ದಂತೆಯೇ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ನಿರ್ಬಂಧಗಳನ್ನು ಹಿಂದಕ್ಕೆ ಪಡೆಯುವ ಭರವಸೆ ಇದೆ. ಇದರಿಂದಾಗಿ ಮುಂದಿನ 12 ತಿಂಗಳುಗಳಲ್ಲಿ ಉತ್ಪಾದನೆಯಲ್ಲಿ ಏರಿಕೆ ಕಂಡುಬರಲಿದೆ ಎನ್ನುವುದು ಕಂಪನಿಗಳ ನಿರೀಕ್ಷೆಯಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT