ಮಂಗಳವಾರ, ಜೂನ್ 22, 2021
28 °C

ವರ್ಕ್ ಫ್ರಮ್ ಹೋಮ್ ವಿಸ್ತರಣೆಗೆ ಒಲ್ಲದ ಉದ್ಯಮಗಳು: ಸಮೀಕ್ಷೆ ವರದಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

iStock Photo

ಜಾಗತಿಕ ಮಟ್ಟದ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ವಿಸ್ತರಣೆಯ ಉದ್ದೇಶ ಹೊಂದಿಲ್ಲ ಮತ್ತು ಕಚೇರಿಯ ಸ್ಥಳಾವಕಾಶ ಕಡಿಮೆ ಮಾಡುವ ಯೋಜನೆಯನ್ನು ಕೈಬಿಟ್ಟಿವೆ ಎಂದು ಸಮೀಕ್ಷೆಯೊಂದು ಹೇಳಿದೆ.

ಕೆಪಿಎಂಜಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದ್ದು, ಒಟ್ಟಾರೆ ಕಂಪನಿಗಳ ಪೈಕಿ ಶೇ 17ರಷ್ಟು ಮಾತ್ರ ಸಿಇಒಗಳು ಕಚೇರಿ ಸ್ಥಳಾವಕಾಶ ಕಡಿತ ಮಾಡುವ ಯೋಜನೆ ಹೊಂದಿದ್ದಾರೆ. ಈ ಸಂಖ್ಯೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇ 69ರಷ್ಟಿತ್ತು ಎಂದು ತಿಳಿದುಬಂದಿದೆ.

ಈಗಾಗಲೇ ಕಚೇರಿ ಸ್ಥಳಾವಕಾಶ ಕಡಿಮೆ ಮಾಡಲಾಗಿದೆ ಮತ್ತು ಮುಂದೆ ಯೋಜನೆ ಹೊಂದಿದ್ದವರು ಅದನ್ನು ಕೈಬಿಟ್ಟಿದ್ದಾರೆ ಎಂದು ಕೆಪಿಎಂಜಿ ವರದಿ ತಿಳಿಸಿದೆ.

ವರ್ಕ್ ಫರ್ಮ್ ಹೋಮ್ ಆದೇಶದ ಬಳಿಕ ಲಂಡನ್, ನ್ಯೂ ಯಾರ್ಕ್ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಹುತೇಕ ಕಚೇರಿಗಳು ತಿಂಗಳ ಕಾಲ ಖಾಲಿ ಉಳಿದಿವೆ.

ಜತೆಗೆ ಕಂಪನಿಗಳ ಸಿಇಒಗಳು, ಸರ್ಕಾರ ಲಸಿಕೆ ಕಾರ್ಯಕ್ರಮವನ್ನು ವಿಸ್ತರಿಸಬೇಕು ಮತ್ತು ಇನ್ನಷ್ಟು ತ್ವರಿತ ಮಾಡಬೇಕು ಎಂದು ಬಯಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಪ್ರಸ್ತುತ ಶೇ 31ರಷ್ಟು ಉದ್ಯಮಗಳು ಮಾತ್ರ ಈ ವರ್ಷ ಪರಿಸ್ಥಿತಿ ಸಹಜ ಸ್ಥಿತಿಗೆ ಬರಬಹುದು ಎಂದಿವೆ. ಆದರೆ ಶೇ 45ರಷ್ಟು ಕಂಪನಿಗಳು, ಮುಂದಿನ ವರ್ಷ ಅಂದರೆ, 2022ರಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು