ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎನ್‌ಡಿಸಿ ಸೇವೆ ಬೆಂಗಳೂರಿನಲ್ಲಿ ಪರೀಕ್ಷಾರ್ಥ ಆರಂಭ

Last Updated 30 ಸೆಪ್ಟೆಂಬರ್ 2022, 18:57 IST
ಅಕ್ಷರ ಗಾತ್ರ

ನವದೆಹಲಿ: ಡಿಜಿಟಲ್‌ ವಾಣಿಜ್ಯಕ್ಕಾಗಿನ ಮುಕ್ತ ವ್ಯವಸ್ಥೆ (ಒಎನ್‌ಡಿಸಿ) ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಣೆ ಕಾಣಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

ಸಣ್ಣ ವ್ಯಾಪಾರಿಗಳು ಇ–ವಾಣಿಜ್ಯ ವಲಯದ ದೈತ್ಯ ಕಂಪನಿಗಳ ಮೇಲೆ ಅವಲಂಬಿತ ಆಗುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಸಚಿವಾಲಯವು ಒಎನ್‌ಡಿಸಿ ವೇದಿಕೆಯನ್ನು ಆರಂಭಿಸಿದೆ. ಇದು ಶುಕ್ರವಾರದಿಂದ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಪರೀಕ್ಷಾರ್ಥವಾಗಿ ಆರಂಭವಾಗಿದೆ ಎಂದು ಸಚಿವಾಲಯ ಹೇಳಿದೆ.

ಆರಂಭಿಕ ಹೆಜ್ಜೆಯಾಗಿ ಬೆಂಗಳೂರಿನ ಗ್ರಾಹಕರು ದಿನಸಿ ವಸ್ತುಗಳು ಹಾಗೂ ರೆಸ್ಟಾರೆಂಟ್‌ಗಳ ಉತ್ಪನ್ನಗಳನ್ನು ಒಎನ್‌ಡಿಸಿ ಜಾಲದ ಭಾಗವಾಗಿರುವ ಆ್ಯಪ್‌ಗಳ ಮೂಲಕ ತರಿಸಿಕೊಳ್ಳಬಹುದು. ಮೈಸ್ಟೋರ್‌, ಪೇಟಿಎಂ, ಸ್ಪೈಸ್‌ಮನಿ ಆ್ಯಪ್‌ಗಳು ಈ ಸೇವೆಗೆ ಈಗ ಲಭ್ಯವಿವೆ. ಡಂಜೊ, ಲೋಡ್‌ಶೇರ್, ಶಿಪ್‌ರಾಕೆಟ್‌ ಕಂಪನಿಗಳು ಸಾಗಾಟದ ಸೇವೆಗಳನ್ನು ಒದಗಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT