ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 5ನೇ ದಿನವೂ ಗೂಳಿ ಓಟ: ಬಿಎಸ್‌ಇ ಕಂಪನಿಗಳ ಒಟ್ಟು ಎಂ–ಕ್ಯಾಪ್‌ ₹404 ಲಕ್ಷ ಕೋಟಿ

Published 25 ಏಪ್ರಿಲ್ 2024, 15:47 IST
Last Updated 25 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಯಲ್ಲಿ ಸತತ ಐದನೇ ದಿನವಾದ ಗುರುವಾರವೂ ಗೂಳಿಯ ಓಟ ಮುಂದುವರಿಯಿತು.

ಬ್ಯಾಂಕಿಂಗ್‌, ಹಣಕಾಸು ಮತ್ತು ಲೋಹದ ಷೇರುಗಳ ಮಾರಾಟದ ಹೆಚ್ಚಳದಿಂದ ಸೂಚ್ಯಂಕಗಳು ಏರಿಕೆ ಕಂಡಿವೆ. 

ದಿನ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 296 ಅಂಶ ಕುಸಿದಿತ್ತು. ನಂತರ ಚೇತರಿಕೆ ಕಂಡಿತು. 486 ಅಂಶ ಜಿಗಿದು 74,339ಕ್ಕೆ ಸ್ಥಿರಗೊಂಡಿತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೂಡ 99 ಅಂಶ ಇಳಿಕೆಯಾಗಿತ್ತು. ನಂತರದ ವಹಿವಾಟಿನಲ್ಲಿ 167 ಅಂಶ ಏರಿಕೆಯಾಗಿ 22,570ಕ್ಕೆ ಕೊನೆಗೊಂಡಿತು. ಐದು ದಿನಗಳಿಂದ ಸೂಚ್ಯಂಕಗಳು ಏರಿಕೆ ಹಾದಿಯಲ್ಲಿದ್ದು, ಹೂಡಿಕೆದಾರರ ಸಂಪತ್ತು ₹11.29 ಲಕ್ಷ ಕೋಟಿಗೆ ಏರಿಕೆಯಾಗಿದೆ. ಒಟ್ಟು ಬಿಎಸ್‌ಇ ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹404 ಲಕ್ಷ ಕೋಟಿಗೆ ಮುಟ್ಟಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಸನ್‌ಫಾರ್ಮಾ, ಜೆಎಸ್‌ಡಬ್ಲ್ಯು ಸ್ಟೀಲ್‌, ಐಟಿಸಿ, ಮಹೀಂದ್ರ ಆ್ಯಂಡ್‌ ಮಹೀಂದ್ರ ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿಗಳು ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಹಿಂದುಸ್ತಾನ್ ಯೂನಿಲಿವರ್‌, ಟೈಟನ್‌, ಬಜಾಜ್‌ ಫೈನಾನ್ಸ್‌, ಮಾರುತಿ ಸುಜುಕಿ ಮತ್ತು ಏಷ್ಯನ್‌ ಪೇಂಟ್ಸ್‌ ಷೇರಿನ ಮೌಲ್ಯ ಇಳಿಕೆಯಾಗಿದೆ.

ಎಕ್ಸಿಸ್‌ ನೆಸ್ಲೆ ಷೇರು ಏರಿಕೆ: ಎಕ್ಸಿಸ್‌ ಬ್ಯಾಂಕ್‌ನ ಷೇರಿನ ಮೌಲ್ಯವು ಶೇ 6ರಷ್ಟು ಏರಿಕೆಯಾಗಿದ್ದು ಬ್ಯಾಂಕ್‌ನ ಎಂ–ಕ್ಯಾಪ್‌ಗೆ ಒಂದೇ ದಿನ ₹19695 ಕೋಟಿ ಸೇರ್ಪಡೆಯಾಗಿದೆ. ಬಿಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 5.98ರಷ್ಟು ಏರಿಕೆ ಕಂಡಿದೆ. ಪ್ರತಿ ಷೇರಿನ ಬೆಲೆಯು ₹1127.25 ಆಗಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 6ರಷ್ಟು ಏರಿಕೆ ಕಂಡಿದ್ದು ಪ್ರತಿ ಷೇರಿನ ಬೆಲೆ ₹1127.45ಕ್ಕೆ ತಲುಪಿದೆ. ನೆಸ್ಲೆ ಇಂಡಿಯಾ ಷೇರಿನ ಮೌಲ್ಯವು ಶೇ 2ರಷ್ಟಕ್ಕೂ ಹೆಚ್ಚು ಏರಿಕೆಯಾಗಿದೆ. ಒಂದೇ ದಿನ ಕಂಪನಿಯ ಎಂ–ಕ್ಯಾಪ್‌ಗೆ ₹5765 ಕೋಟಿ ಸೇರ್ಪಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT