ಎಲ್‌ಐಸಿ ಷೇರಿನ ಮೌಲ್ಯ ಏರಿಕೆ
ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರತಿ ಷೇರಿನ ಮೌಲ್ಯ ಬಿಎಸ್‌ಇಯಲ್ಲಿ ಶೇ 4.05 ಮತ್ತು ಎನ್‌ಎಸ್‌ಇಯಲ್ಲಿ ಶೇ 3.96ರಷ್ಟು ಏರಿಕೆ ಆಗಿದೆ. ಪ್ರತಿ ಷೇರಿನ ಬೆಲೆ ಕ್ರಮವಾಗಿ ₹902 ಮತ್ತು ₹901.25 ಆಗಿದೆ. ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ (ಐಪಿಒ) ಎಲ್‌ಐಸಿಯ ಪ್ರತಿ ಷೇರಿನ ಬೆಲೆ ₹949 ಆಗಿತ್ತು. ಪ್ರಸಕ್ತ ವರ್ಷದ ಫೆಬ್ರುವರಿ 9ರಂದು ಷೇರಿನ ಬೆಲೆಯು ₹1175ಕ್ಕೆ ಮುಟ್ಟಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿತ್ತು. ಕೇಂದ್ರ ಸರ್ಕಾರವು ಇತ್ತೀಚೆಗೆ ಎಲ್‌ಐಸಿ ನೌಕರರ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದು ಕಂಪನಿಗೆ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಲಾಗಿದೆ. ಹಾಗಾಗಿ ಷೇರುಪೇಟೆಯ ಹಿಂದಿನ ವಹಿವಾಟುಗಳಲ್ಲಿ ಎಲ್‌ಐಸಿ ಷೇರಿನ ಬೆಲೆ ಇಳಿಕೆಯಾಗಿತ್ತು. ಸದ್ಯ ಷೇರಿನ ಬೆಲೆಯು ಐಪಿಒ ಅವಧಿಯಲ್ಲಿ ನಿಗದಿಪಡಿಸಿದ್ದ ಬೆಲೆಗಿಂತಲೂ ಕಡಿಮೆಯಾಗಿದೆ.