ಬುಧವಾರ, ಮೇ 12, 2021
31 °C

ನಾಲ್ಕನೇ ತ್ರೈಮಾಸಿಕ: ಮಾರುತಿ ಸುಜುಕಿ ಲಾಭ ಶೇ 6ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು 2020–21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್) ₹ 1,241 ಕೋಟಿ ನಿವ್ವಳ ಲಾಭ ಗಳಿಸಿದೆ.

2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು ₹ 1,322 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಈ ಬಾರಿ ಶೇಕಡ 6.14ರಷ್ಟು ಇಳಿಕೆ ಆಗಿದೆ.

ಮಾರಾಟದಿಂದ ಬಂದಿರುವ ವರಮಾನವು ₹ 17,187 ಕೋಟಿಗಳಿಂದ ₹ 22,959 ಕೋಟಿಗಳಿಗೆ, ಅಂದರೆ ಶೇ 33.58ರಷ್ಟು, ಏರಿಕೆ ಕಂಡಿದೆ.

ಕಂಪನಿಯು ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟಾರೆ 4.92 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 27.8ರಷ್ಟು ಏರಿಕೆ ಆಗಿದೆ. ದೇಶಿ ಮಾರುಕಟ್ಟೆಯಲ್ಲಿ ಆಗಿರುವ ಮಾರಾಟದ ಪ್ರಮಾಣ ಶೇ 26.7ರಷ್ಟು ಹೆಚ್ಚಾಗಿದೆ.

2020–21ನೇ ಹಣಕಾಸು ವರ್ಷಕ್ಕೆ ಕಂಪನಿಯು ₹ 4,389 ಕೋಟಿ ನಿವ್ವಳ ಲಾಭ ಗಳಿಸಿದ್ದು, ಅದಕ್ಕೂ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ 22.69ರಷ್ಟು ಇಳಿಕೆಯಾಗಿದೆ. ಮಾರಾಟದಿಂದ ಬಂದಿರುವ ವರಮಾನವು ₹ 71,704 ಕೋಟಿಗಳಿಂದ ₹ 66,571 ಕೋಟಿಗಳಿಗೆ ಇಳಿಕೆಯಾಗಿದೆ.

ಲಾಭಾಂಶ: ವರ್ಷದ ಹಣಕಾಸು ಸಾಧನೆಗೆ ಅನುಗುಣವಾಗಿ ಹಾಗೂ ಅನಿಶ್ಚಿತ ವಹಿವಾಟಿನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು 2020–21ನೇ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹ 45 ಲಾಭಾಂಶವನ್ನು ನೀಡಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ ಎಂದು ಕಂಪನಿಯು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು