ಬೆಂಗಳೂರು:ದೇಶದ ಷೇರುಪೇಟೆಗಳ ವಹಿವಾಟು ಸತತ ಎರಡನೇ ವಾರವೂ ನಕಾರಾತ್ಮಕವಾಗಿ ಅಂತ್ಯವಾಗಿದೆ. ಇದರಿಂದಾಗಿ ಷೇರುಪೇಟೆ ನೋಂದಾಯಿತ ಕೆಲವು ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಇಳಿಕೆ ಆಗಿದೆ.

ಶುಕ್ರವಾರಕ್ಕೆ ಕೊನೆಗೊಂಡ ವಾರದ ವಹಿವಾಟಿನಲ್ಲಿ ಪ್ರಮುಖ 10 ಕಂಪನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್), ಟಿಸಿಎಸ್ ಮತ್ತು ಇನ್ಫೊಸಿಸ್ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ₹1.22 ಲಕ್ಷ ಕೋಟಿ ಇಳಿಕೆ ಕಂಡುಬಂದಿದೆ. ರಿಲಯನ್ಸ್ ಕಂಪನಿಯು ₹60,177 ಕೋಟಿಯಷ್ಟು ಗರಿಷ್ಠ ನಷ್ಟ ಅನುಭವಿಸಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ವಾರದ ವಹಿವಾಟಿನಲ್ಲಿ 31 ಅಂಶ ಇಳಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 19 ಅಂಶ ಇಳಿಕೆ ಆಗಿದೆ. ಇದಕ್ಕೂ ಹಿಂದಿನ ವಾರವೂ ನಕಾರಾತ್ಮಕ ವಹಿವಾಟು ನಡೆದಿತ್ತು.

ಎಫ್‌ಐಐ ಒಳಹರಿವು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ನಾಲ್ಕು ದಿನಗಳ ವಾರದ ವಹಿವಾಟಿನಲ್ಲಿ ಮೂರು ದಿನವೂ ಷೇರುಗಳನ್ನು ಮಾರಾಟ ಮಾಡಿದ್ದರೆ, ಒಂದು ದಿನ ಮಾತ್ರವೇ ಖರೀದಿ ನಡೆಸಿದ್ದಾರೆ. ಮೂರು ದಿನಗಳ ವಹಿವಾಟಿನಲ್ಲಿ ₹2,852 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದು, ಮಂಗಳವಾರ ₹4,166 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಹೀಗಾಗಿ ಒಟ್ಟಾರೆ ಒಳಹರಿವು ₹1,314 ಕೋಟಿ ಆಗಿದೆ.

ಕಚ್ಚಾ ತೈಲ ದರ ಇಳಿಕೆ
ವಾರದ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಒಂದು ಬ್ಯಾರಲ್‌ಗೆ 8.2 ಡಾಲರ್‌ನಷ್ಟು ಇಳಿಕೆ ಕಂಡಿದ್ದು, 94.22 ಡಾಲರ್‌ಗೆ ತಲುಪಿದೆ.

ಮಂದಗತಿಯ ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಹಿಂಜರಿತದ ಆತಂಕದಿಂದಾಗಿ ತೈಲ ದರ ಇಳಿಕೆ ಕಂಡಿದೆ.

ಒಪೆಕ್+ ದೇಶಗಳು ಸೋಮವಾರ ಸಭೆ ನಡೆಸಲಿದ್ದು, ತೈಲ ಉತ್ಪಾದನೆಯ ಪ್ರಮಾಣವನ್ನು ನಿರ್ಧರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.