ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬನೆಗೆ ಕಿರು ಹಣಕಾಸು ಸಂಸ್ಥೆ

Last Updated 21 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಕಿರು ಹಣಕಾಸು ಸಂಸ್ಥೆಗಳು’ (ಮೈಕ್ರೊ ಫೈನಾನ್ಸ್‌ ಇನ್‌ಸ್ಟಿಟ್ಯೂಷನ್ಸ್‌) ಹೆಸರೇ ಹೇಳುವಂತೆ ಸಣ್ಣ ಪ್ರಮಾಣದಲ್ಲಿ ಸಾಲ ಒದಗಿಸುತ್ತವೆ. ಬ್ಯಾಂಕಿಂಗ್‌ ಸೇವೆಯಿಂದ ವಂಚಿತ ಗ್ರಾಮೀಣ ಪ್ರದೇಶಗಳಲ್ಲಿನ ಅತಿ ಕಡಿಮೆ ವರಮಾನ ಹೊಂದಿರುವವರಿಗೆ ಸಾಲ ನೀಡುವುದಷ್ಟೇ ಅಲ್ಲದೆಮಹಿಳೆಯರಲ್ಲಿ ಉದ್ಯಮಶೀಲತಾ ಗುಣ ಚಿಗುರೊಡೆಯುವಂತೆಯೂ ಈ ಸಂಸ್ಥೆಗಳು ನೆರವಾಗುತ್ತಿವೆ’ ಎಂದು ಕಿರು ಹಣಕಾಸು ಸಂಸ್ಥೆಗಳ ಜಾಲದ (ಎಂಫಿನ್‌) ಅಧ್ಯಕ್ಷ ಉದಯ ಕುಮಾರ್‌ ವಿಶ್ಲೇಷಿಸುತ್ತಾರೆ.

‘ಈಸಂಸ್ಥೆಗಳುಗ್ರಾಮೀಣ ಪ್ರದೇಶದಲ್ಲಿ ಭದ್ರವಾಗಿ ನೆಲೆಯೂರಿವೆ. ಪಶುಸಂಗೋಪನೆ, ಕೃಷಿ, ಮದುವೆ, ಹಬ್ಬ–ಹರಿದಿನ, ಶಿಕ್ಷಣ, ವೈದ್ಯಕೀಯ ಹೀಗೆ ಇನ್ನೂ ಹಲವುತುರ್ತು ಅಗತ್ಯಗಳಿಗೆ ಬೇಕಾದ ಅಲ್ಪಾವಧಿಯ ಸಾಲದ ನೆರವು ನೀಡುತ್ತಿವೆ. ಇದರ ಜತೆಗೆ, ಲಭ್ಯವಾಗುವ ಸಾಲವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ತಿಳವಳಿಕೆಯನ್ನೂ ನೀಡುತ್ತಿವೆ.ಪಶುಸಂಗೋಪನೆಗೆ ಶೇ 45–50ರಷ್ಟು ಗರಿಷ್ಠ ಸಾಲ ನೀಡಲಾಗುತ್ತಿದೆ. ಇನ್ನು ಸಣ್ಣ ವ್ಯಾಪಾರ (ಚಹಾ, ಹಣ್ಣು, ತರಕಾರಿ ಅಂಗಡಿ ಇತ್ಯಾದಿ) ಶೇ 30ರಷ್ಟು ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಶೇ 15 ಸಾಲ ನೀಡಲಾಗುತ್ತಿದೆ.

‘ಇಲ್ಲಿ ನೀಡುವ ಸಾಲಕ್ಕೆ ಬ್ಯಾಂಕ್‌ನಂತೆ ಯಾವುದೇ ಖಾತರಿ ಅಥವಾ ಯಾವುದೇ ರೀತಿಯ ಅಡಮಾನ ಕೇಳುವುದಿಲ್ಲ. ಈ ದೃಷ್ಟಿಯಿಂದಾಗಿ ಬ್ಯಾಂಕ್‌ಗಳಿಗಿಂತಲೂ ಪ್ರತ್ಯೇಕವಾಗಿ ನಿಲ್ಲುತ್ತವೆ. ಸಾಲ ನೀಡುವುದಕ್ಕಷ್ಟೇ ಸೀಮಿತವಾಗಿರದೆ ಆ ಸಾಲದಿಂದ ಸ್ವ ಉದ್ಯೋಗ ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಹೇಗೆ ಎನ್ನುವ ಮಾರ್ಗದರ್ಶನವನ್ನೂ ಇವುಗಳು ನೀಡುತ್ತವೆ.

‘ಬ್ಯಾಂಕ್‌ಗಳು ತಲುಪಲಾಗದೇ ಇರುವ ಸ್ಥಳಗಳಲ್ಲಿ ಈ ಸಂಸ್ಥೆಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಗ್ರಾಮೀಣ ಭಾಗದಲ್ಲಿ ಇಂದಿಗೂ ಬಹಳಷ್ಟು ಜನರು ಸಾಲ ಪಡೆಯಲು ಲೇವಾದೇವಿಗಾರರನ್ನೂ ನೆಚ್ಚಿಕೊಂಡಿದ್ದಾರೆ. ಈ ಸಂಸ್ಥೆಗಳಿಂದ ಸಾಲ ಪಡೆಯುವ ಸಾಮರ್ಥ್ಯ ಇರುವ ಶೇ 60 ರಿಂದ ಶೇ 70 ರಷ್ಟು ಗ್ರಾಹಕರು ಲೇವಾದೇವಿಗಾರರನ್ನು ಅವಲಂಬಿಸಿದ್ದಾರೆ. ಇಂತಹವರನ್ನು ತಲುಪುವುದು ಉದ್ಯಮದ ಮುಂದಿರುವ ಸವಾಲು.

‘ದೇಶದಲ್ಲಿ 45 ಕೋಟಿ ಕುಟಂಬಗಳಿವೆ. ಇದರಲ್ಲಿ ₹ 2 ರಿಂದ ₹ 3ಕೋಟಿಗೂ ಕಡಿಮೆ ಆದಾಯ ಇರುವವರನ್ನು 25 ಕೋಟಿ ಕುಟುಂಬಗಳಿವೆ. ಅದರಲ್ಲಿಕನಿಷ್ಠ 15 ರಿಂದ 17 ಕೋಟಿ ಕುಟುಂಬಗಳಿಗೆ ಸಾಲ ನೀಡುವ ಸಾಮರ್ಥ್ಯ ಈ ಸಂಸ್ಥೆಗಳಿಗಿದೆ. ಆದರೆ, ಈಗ 3 ಕೋಟಿ ಕುಟುಂಬಗಳನ್ನು ಮಾತ್ರವೇ ತಲುಪುತ್ತಿದ್ದೇವೆ. ಹೀಗಾಗಿ ಇಲ್ಲಿರುವ ಅವಕಾಶಗಳ ಪ್ರಯೋಜನ ಪಡೆಯುವ ಉದ್ದೇಶದಿಂದ ಹೊಸದಾಗಿ ಉದ್ಯಮ ಸೇರುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ.

‘ನೋಟು ರದ್ದತಿಯಿಂದಾಗಿ 2016–17ರಲ್ಲಿ ಈ ಉದ್ಯಮ ಸಂಕಷ್ಟಕ್ಕೆ ಒಳಗಾಗಿತ್ತು. ಪ್ರಗತಿ ಇಳಿಮುಖವಾಗಿದ್ದರೂ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಯಲ್ಲಿ ಬಾಕಿ ಉಳಿಸಿಕೊಂಡಿಲ್ಲ. 2017–18ರಲ್ಲಿ ಉದ್ಯಮವು ಮತ್ತೆ ಚೇತರಿಸಿಕೊಂಡಿತು. ಸಾಲ ನೀಡಿಕೆಯಲ್ಲಿ ಶೇ 50 ರಷ್ಟು ಪ್ರಗತಿ ಸಾಧ್ಯವಾಗಿದೆ.

‘ಗ್ರಾಮೀಣ ಭಾಗದಲ್ಲಿ ಜನರ ಖರೀದಿ ಸಾಮರ್ಥ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಇದಕ್ಕೆ ಕಾರಣಗಳು ಹಲವು. ಮುಖ್ಯವಾಗಿ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಏರಿಕೆ ಮತ್ತು ‘ಎಂನರೇಗಾ’ದಂತಹ ಪ್ರಮುಖ ಯೋಜನೆಗಳು ಈ ವಲಯದಲ್ಲಿ ವರಮಾನ ಹೆಚ್ಚಳಕ್ಕೆ ನೆರವಾಗುತ್ತಿವೆ.

‘ಆರ್ಥಿಕ ಬದಲಾವಣೆಗಳ ಜತೆಗೆ, ಸಾಂಸ್ಕೃತಿಕ ಬದಲಾವಣೆಯೂ ಕಂಡುಬರುತ್ತಿದೆ. ಮಹಿಳೆಯರಲ್ಲಿ ಸಾಲ ಮರುಪಾವತಿ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದೆ. ಆರ್ಥಿಕ ಸಾಕ್ಷರತೆ ಹೆಚ್ಚಾಗುತ್ತಿದೆ. ಸಾಲ ಪಡೆಯುವವರು ಬಡವರಷ್ಟೇ ಅಲ್ಲ, ಅನಕ್ಷರಸ್ಥರೂ ಹೌದು. ಆದರೆ, ಅಲ್ಪ ಪ್ರಮಾಣದ ಬಂಡವಾಳದಲ್ಲಿ ಆರಂಭಿಸುವ ಸಣ್ಣ ಉದ್ಯಮದಲ್ಲಿ ಯಶಸ್ಸು ಸಾಧಿಸಿ, ಪ್ರಾಮಾಣಿಕವಾಗಿ ಸಾಲ ಮರು ಪಾವತಿಸುತ್ತಿದ್ದಾರೆ.ಮೂರನೇ ಬಾರಿ ಸಾಲ ಪಡೆದಿರುವವರೂ ಇದ್ದಾರೆ’ ಎಂದರು.

ಬ್ಯಾಂಕ್‌ಗಳಿಗಿಂತ ಹೇಗೆ ಭಿನ್ನ?

* ಅತಿ ಕಡಿಮೆ ಆದಾಯ ಹೊಂದಿರುವವರಿಗೆ ಸಾಲ ನೀಡುತ್ತವೆ

* ಸ್ವಂತ ಉದ್ಯಮ ಸ್ಥಾಪಿಸಬಯಸುವವರಿಗೆ ಆದ್ಯತೆ

* ಅಲ್ಪಾವಧಿ ಸಾಲ ನೀಡುತ್ತವೆ. ಅದು ಮರುಪಾವತಿ ಆದ ಬಳಿಕ ಮತ್ತೆ ಸಾಲ ಪಡೆಯಬಹುದು

* ಯಾವುದೇ ಭದ್ರತೆ ಅಥವಾ ಅಡಮಾನ ಬೇಕಿಲ್ಲ

* ಆದಾಯ ಸೃಷ್ಟಿಸುವ ಉದ್ದೇಶಗಳಿಗೆ ಸಾಲ ನೀಡಲು ಹೆಚ್ಚು ಆದ್ಯತೆ ನೀಡುತ್ತವೆ

* ಸಣ್ಣ ವರ್ತಕರು, ಆಹಾರ ಸಂಸ್ಕರಣೆ, ಕಿರಾಣಿ ಅಂಗಡಿ ನಡೆಸುವವರು, ಕರಕುಶಲಕರ್ಮಿಗಳು, ಸೇವೆ ಪೂರೈಸುವವರು, ರಸ್ತೆ ಬದಿ ವ್ಯಾಪಾರಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಸಾಲ ಪಡೆಯಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT