ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮರು ಖರೀದಿ ನಿರ್ಧಾರ ಕೈಬಿಟ್ಟ ಮೈಂಡ್‌ಟ್ರೀ

Last Updated 26 ಮಾರ್ಚ್ 2019, 17:37 IST
ಅಕ್ಷರ ಗಾತ್ರ

ನವದೆಹಲಿ: ಐ.ಟಿ ಸಂಸ್ಥೆ ಮೈಂಡ್‌ಟ್ರೀ ತನ್ನ ಷೇರು ಖರೀದಿಯ ಉದ್ದೇಶಿತ ಪ್ರಸ್ತಾವವನ್ನು ಕೈಬಿಟ್ಟಿದೆ.

ಮಂಗಳವಾರ ನಡೆದ ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಷೇರು ಮರುಖರೀದಿಗೆ ಮುಂದಾಗದೇ ಇರಲು ನಿರ್ಧರಿಸಿದ್ದಾರೆ ಸಂಸ್ಥೆಯು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಷೇರು ಮರು ಖರೀದಿ ಸಂಬಂಧ ಸಂಸ್ಥೆಯ ನಿರ್ದೇಶಕ ಮಂಡಳಿಯು ಮಾರ್ಚ್‌ 20ರಂದು ನಡೆದ ಸಭೆಯಲ್ಲಿ ವಿವರವಾದ ಚರ್ಚೆಯ ನಂತರ, ಯಾವುದೇ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಭೆಯನ್ನು 26ಕ್ಕೆ ಮುಂದೂಡಲಾಗಿತ್ತು.

ಒತ್ತಾಯಪೂರ್ವಕವಾಗಿ ಸ್ವಾಧೀನಕ್ಕೆ ಪಡೆಯಲು ಎಂಜಿನಿಯರಿಂಗ್‌ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟುಬ್ರೊ (ಎಲ್‌ಆ್ಯಂಡ್‌ಟಿ) ನೀಡಿರುವ ಕೊಡುಗೆಯ ಬಗ್ಗೆ ವರದಿ ನೀಡಲು ಸ್ವತಂತ್ರ ನಿರ್ದೇಶಕರ ಸಮಿತಿಯೊಂದನ್ನು ರಚನೆ ಮಾಡಿದೆ.

ಎಲ್‌ಆ್ಯಂಡ್‌ಟಿ ಕೊಡುಗೆಗೆ ಮೈಂಡ್‌ಟ್ರೀನ್ ಸಹ ಸ್ಥಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಂಡ್‌ಟ್ರೀನಲ್ಲಿನ ಶೇ 66ರಷ್ಟು ಪಾಲು ಬಂಡವಾಳವನ್ನು ₹ 10,800 ಕೋಟಿಗೆ ಖರೀದಿಸಲು ಎಲ್‌ಆ್ಯಂಡ್‌ಟಿ ಮುಂದಾಗಿದೆ.

ಈ ಸಂಬಂಧ, ಸಂಸ್ಥೆಯಲ್ಲಿನ ಕೆಫೆ ಕಾಫಿ ಡೇ ಮಾಲೀಕ ವಿ. ಜಿ. ಸಿದ್ದಾರ್ಥ ಅವರ ಶೇ 20.32ರಷ್ಟು ಷೇರುಗಳನ್ನು, ಮುಕ್ತ ಮಾರುಕಟ್ಟೆಯಿಂದ ಶೇ 15ರಷ್ಟು ಷೇರುಗಳನ್ನು ಮತ್ತು ಶೇ 31ರಷ್ಟು ಷೇರುಗಳನ್ನು ಮುಕ್ತ ಕೊಡುಗೆ ಮೂಲಕ ಖರೀದಿಸಲು ಎಲ್‌ಆ್ಯಂಡ್‌ಟಿ ಉದ್ದೇಶಿಸಿದೆ.

ಡಿಎಲ್‌ಎಫ್‌: ಕ್ಯುಐಪಿ

ರಿಯಲ್‌ ಎಸ್ಟೇಟ್‌ ವಲಯದ ಪ್ರಮುಖ ಸಂಸ್ಥೆ ಡಿಎಲ್‌ಎಫ್‌, ಅರ್ಹ ಸಾಂಸ್ಥಿಕ ನೀಡಿಕೆಗೆ (ಕ್ಯುಐಪಿ) ಸೋಮವಾರ ಚಾಲನೆ ನೀಡಿದೆ.

17.3 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 3 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ಪ್ರತಿ ಷೇರಿನ ಬೆಲೆಯನ್ನು₹ 193.01 ರಂತೆ ನಿಗದಿಪಡಿಸಲಾಗಿದೆ. ಸಾಲಮುಕ್ತ ಕಂಪನಿಯಾಗುವ ಉದ್ದೇಶದಿಂದ ಈ ಬಂಡವಾಳ ಸಂಗ್ರಹಿಸಲು ನಿರ್ಧರಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT