ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕತೆ ‘ಸ್ಥಿರ’ ಎಂದ ಮೂಡಿಸ್

Last Updated 5 ಅಕ್ಟೋಬರ್ 2021, 15:39 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅರ್ಥ ವ್ಯವಸ್ಥೆ ಕುರಿತ ತನ್ನ ಮುನ್ನೋಟವನ್ನು ಜಾಗತಿಕ ರೇಟಿಂಗ್ಸ್ ಸಂಸ್ಥೆ ಮೂಡಿಸ್ ಪರಿಷ್ಕರಿಸಿದೆ. ದೇಶದ ಅರ್ಥ ವ್ಯವಸ್ಥೆಯುನ್ನು ‘ನಕಾರಾತ್ಮಕ’ ಎಂದು ಈ ಹಿಂದೆ ವರ್ಗೀಕರಿಸಿದ್ದ ಮೂಡೀಸ್ ಈಗ, ವ್ಯವಸ್ಥೆಯು ‘ಸ್ಥಿರ’ವೆಂದು ವರ್ಗೀಕರಣ ಮಾಡಿದೆ. ಅರ್ಥ ವ್ಯವಸ್ಥೆಯು ಕುಸಿತ ಕಾಣುವ ಅಪಾಯಗಳು ತಗ್ಗುತ್ತಿವೆ ಎಂದು ಹೇಳಿದೆ.

ಆದರೆ, ಸಾಲದ ಹೊರೆ ಹಾಗೂ ಸಾಲವನ್ನು ‍ಪಡೆಯುವ ವಿಚಾರದಲ್ಲಿ ಹೆಚ್ಚಿನ ಸಾಮರ್ಥ್ಯ ಇಲ್ಲದಿರುವುದರಿಂದ ಎದುರಾಗಬಹುದಾದ ಅಪಾಯಗಳು ಉಳಿದುಕೊಂಡಿವೆ ಎಂದು ಸಂಸ್ಥೆ ಎಚ್ಚರಿಸಿದೆ.

ಆರ್ಥಿಕ ಚೇತರಿಕೆಯು ನಡೆಯುತ್ತಿದೆ. ಆರ್ಥಿಕ ಚಟುವಟಿಕೆಗಳು ಚುರುಕು ಪಡೆಯುತ್ತಿವೆ. ಮುಂದಿನ ಕೆಲವು ವರ್ಷಗಳಲ್ಲಿ ವಿತ್ತೀಯ ಕೊರತೆಯು ಹಂತಹಂತವಾಗಿ ಕಡಿಮೆ ಆಗುತ್ತದೆ ಎಂದು ಸಂಸ್ಥೆ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು 2019ರ ಮಟ್ಟಕ್ಕಿಂತ ಹೆಚ್ಚಿನದಾಗಿರಲಿದೆ ಎಂದು ಮೂಡಿಸ್ ಅಂದಾಜು ಮಾಡಿದೆ. ಈ ವರ್ಷ ಶೇ 9.3ರಷ್ಟು ಬೆಳವಣಿಗೆ, ಮುಂದಿನ ವರ್ಷದಲ್ಲಿ ಶೇ 7.9ರಷ್ಟು ಬೆಳವಣಿಗೆ ಇರಲಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT