ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹40,314 ಕೋಟಿ ಆಸ್ತಿ ನಗದೀಕರಣ

Published 2 ಏಪ್ರಿಲ್ 2024, 15:36 IST
Last Updated 2 ಏಪ್ರಿಲ್ 2024, 15:36 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2023–24ನೇ ಆರ್ಥಿಕ ಸಾಲಿನಡಿ ₹40,314 ಕೋಟಿಯಷ್ಟು ಆಸ್ತಿ ನಗದೀಕರಣ ಮಾಡಿದೆ. ‌

₹28,968 ಕೋಟಿ ಆಸ್ತಿ ನಗದೀಕರಣಕ್ಕೆ ಗುರಿ ಹೊಂದಲಾಗಿತ್ತು. ಇದಕ್ಕಿಂತಲೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಲ್ಕ–ನಿರ್ವಹಣೆ–ವರ್ಗಾವಣೆ ಮಾದರಿಯಡಿ (ಟಿಒಪಿ) ₹15,968 ಕೋಟಿ, ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್‌ ಮಾದರಿಯಡಿ ₹15,700 ಕೋಟಿ ಹಾಗೂ ಭದ್ರತೆ ಮಾದರಿಯಲ್ಲಿ ₹8,646 ಕೋಟಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.

2022–23ನೇ ಆರ್ಥಿಕ ವರ್ಷದಲ್ಲಿ ವಿವಿಧ ಮಾದರಿಯಡಿ ₹32,855 ಕೋಟಿ ನಗದೀಕರಿಸಲಾಗಿತ್ತು. ಇಲ್ಲಿಯವರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಆಸ್ತಿ ನಗದೀಕರಣ ಮೊತ್ತವು ₹1 ಲಕ್ಷ ಕೋಟಿ ದಾಟಿದೆ ಎಂದು ತಿಳಿಸಿದ್ದಾರೆ.

ಆಸ್ತಿ ನಗದೀಕರಣದ ಮೂಲಕ ಹೆದ್ದಾರಿಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುತ್ತದೆ. ಈ ಆಸ್ತಿಗಳ ಮೇಲೆ ಸರ್ಕಾರದ ಒಡೆತನವಿರುತ್ತದೆ. ಇದು ದೀರ್ಘಾವಧಿಯ ಗುತ್ತಿಗೆಯಾಗಿದ್ದು, ಅವಧಿ ಮುಗಿದ ಬಳಿಕ ಆಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT