ನವದೆಹಲಿ: ಆನ್ಲೈನ್ ಗೇಮಿಂಗ್ ಆ್ಯಪ್ ‘ಮೊಬೈಲ್ ಪ್ರೀಮಿಯರ್ ಲೀಗ್’ (ಎಂಪಿಎಲ್) ಶೇ 60ರಷ್ಟು ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪನಿಯ ಮೂಲಗಳು ಭಾನುವಾರ ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಣ ಕಟ್ಟಿ ಆಡಲಾಗುವ ಆನ್ಲೈನ್ ಆಟಗಳನ್ನು ನಿಷೇಧಿಸಿದೆ. ಇದು ದೇಶದ ಆನ್ಲೈನ್ ಆಟಗಳ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ಇದು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಕಾರಣವಾಗಿದೆ ಎಂದು ತಿಳಿಸಿವೆ.

ಮಾರ್ಕೆಟಿಂಗ್, ಹಣಕಾಸು, ಕಾರ್ಯಾಚರಣೆ, ಎಂಜಿನಿಯರಿಂಗ್ ಮತ್ತು ಕಾನೂನು ವಿಭಾಗದಲ್ಲಿನ 500 ಸಿಬ್ಬಂದಿಯಲ್ಲಿ ಅಂದಾಜು 300 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ ಎಂದು ತಿಳಿಸಿವೆ.

ಕಂಪನಿಯ ಉದ್ಯೋಗಿಗಳಿಗೆ ಇ–ಮೇಲ್ ಮಾಡಿರುವ ಸಿಇಒ ಸಾಯಿ ಶ್ರೀನಿವಾಸ್, ‘ಕಂಪನಿಗೆ ಶೇ 50ರಷ್ಟು ವರಮಾನ ಭಾರತದಿಂದಲೇ ಬರುತ್ತಿತ್ತು. ಸರ್ಕಾರದ ಕಾನೂನಿನಿಂದ ಭವಿಷ್ಯದಲ್ಲಿ ವರಮಾನ ಸಂಗ್ರಹಿಸುವ ಸಾಧ್ಯತೆ ಇಲ್ಲ. ಹೀಗಾಗಿ, ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದೇವೆ. ಕೆಲಸ ಕಳೆದುಕೊಳ್ಳಲಿರುವವರಿಗೆ ನೆರವು ನೀಡಲಾಗುವುದು’ ಎಂದು ತಿಳಿಸಿದ್ದಾರೆ. ಆದರೆ, ಎಷ್ಟು ಜನರನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ ಎಂದು ಇ–ಮೇಲ್ನಲ್ಲಿ ಹೇಳಿಲ್ಲ.

ಈ ಕುರಿತು ರಾಯಿಟರ್ಸ್ಗೆ ಎಂಪಿಎಲ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಕಳೆದ ವರ್ಷ ಎಂಪಿಎಲ್ನ ಭಾರತದ ವರಮಾನ ₹881 ಕೋಟಿ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.