ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75 ಸಾವಿರ ಮಹಿಳೆಯರಿಗೆ ಕೌಶಲ ತರಬೇತಿ: ಸತ್ಯ ನಾದೆಲ್ಲಾ

Published 8 ಫೆಬ್ರುವರಿ 2024, 16:36 IST
Last Updated 8 ಫೆಬ್ರುವರಿ 2024, 16:36 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಸಕ್ತ ವರ್ಷ ಭಾರತದಲ್ಲಿ 75 ಸಾವಿರ ಮಹಿಳೆಯರಿಗೆ ಮಾಹಿತಿ ತಂತ್ರಜ್ಞಾನ ಕುರಿತ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ’ ಎಂದು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್‌ ತಂತ್ರಜ್ಞಾನ ವಲಯದಲ್ಲಿ ಲಿಂಗ ಅಸಮಾನತೆ ನಿರ್ಮೂಲನೆಗಾಗಿ ಮೈಕ್ರೊಸಾಫ್ಟ್‌ ಕಂಪನಿಯು ‘ಕೋಡ್‌; ವಿಥೌಟ್‌ ಬ್ಯಾರಿಯರ್‌’ ಕಾರ್ಯಕ್ರಮ ರೂಪಿಸಿದೆ. 

ನಗರದಲ್ಲಿ ಗುರುವಾರ ಮೈಕ್ರೊಸಾಫ್ಟ್‌ ತಂತ್ರಜ್ಞರನ್ನು ಉದ್ದೇಶಿಸಿ ಮಾತನಾಡಿದ ನಾದೆಲ್ಲಾ ಅವರು,  ಭಾರತದಲ್ಲಿಯೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು. ಮಹಿಳೆಯರಲ್ಲಿ ತಾಂತ್ರಿಕ ಜ್ಞಾನದ ಬಗ್ಗೆ ಕೌಶಲ ಬೆಳೆಸಲು ಇದರಿಂದ ಸಹಕಾರಿಯಾಗಲಿದೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT