ಮಂಗಳವಾರ, ಆಗಸ್ಟ್ 3, 2021
21 °C

ಗೋಯಲ್‌ ವಿದೇಶ ಪ್ರಯಾಣಕ್ಕೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜೆಟ್‌ ಏರ್‌ವೇಸ್‌ನ ಮಾಜಿ ಅಧ್ಯಕ್ಷ ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಅನಿತಾ ಗೋಯಲ್‌ ಅವರ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಲಾಗಿದೆ.

ಎಮಿರೇಟ್ಸ್‌ ವಿಮಾನ ‘ಇಕೆ–507’ ಮೂಲಕ ಇಲ್ಲಿಂದ ಶನಿವಾರ ಮಧ್ಯಾಹ್ನ ದುಬೈಗೆ ಹೊರಟಿದ್ದ ಗೋಯಲ್‌ ದಂಪತಿಗೆ ವಲಸೆ ಅಧಿಕಾರಿಗಳು ಕೊನೆ ಕ್ಷಣದಲ್ಲಿ ವಿಮಾನ ಏರಲು ಅವಕಾಶ ನಿರಾಕರಿಸಿದರು. 

ಅನಿತಾ ಗೋಯಲ್‌ ಅವರ ಹೆಸರಿನಲ್ಲಿದ್ದ ಸೂಟ್‌ಕೇಸ್‌ಗಳನ್ನು ವಿಮಾನಕ್ಕೆ ಸಾಗಿಸಲಾಗಿತ್ತು. ಆನಂತರ ಅವುಗಳನ್ನು ಮರಳಿ ಇಳಿಸಲಾಗಿತ್ತು. ಈ ಬಗ್ಗೆ ನರೇಶ್‌ ಗೋಯಲ್‌ ಅವರಿಂದ ಪ್ರತಿಕ್ರಿಯೆ ಪಡೆಯುವ ಪ್ರಯತ್ನ ಫಲ ನೀಡಿಲ್ಲ.

ಜೆಟ್‌ ಏರ್‌ವೇಸ್‌ನ ಸಿಬ್ಬಂದಿಗೆ ಸಂಸ್ಥೆಯ ಆಡಳಿತ ಮಂಡಳಿ ವೇತನ ಪಾವತಿಸದ ಕಾರಣಕ್ಕೆ ಗೋಯಲ್‌ ಮತ್ತು ಇತರ ನಿರ್ದೇಶಕರ ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಬೇಕು ಎಂದು ನೌಕರರ ಸಂಘ ಮನವಿ ಮಾಡಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು