ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ಗೆ ಜೆಎಸ್‌ಡಬ್ಲ್ಯು ಅನುದಾನ

Published 14 ಏಪ್ರಿಲ್ 2024, 19:28 IST
Last Updated 14 ಏಪ್ರಿಲ್ 2024, 19:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನಾಗರಬಾವಿಯಲ್ಲಿ ಇರುವ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ಅಕಾಡೆಮಿಕ್‌ ಬ್ಲಾಕ್‌, ಆವರಣದ ಮರು ಅಭಿವೃದ್ಧಿ, ವಿಸ್ತರಣೆ ಮತ್ತು ಕಾನೂನಿನ ಭವಿಷ್ಯ ಕುರಿತ ಜೆಎಸ್‌ಡಬ್ಲ್ಯು ಕೇಂದ್ರದ ಸ್ಥಾಪನೆಗಾಗಿ ಜೆಎಸ್‌ಡಬ್ಲ್ಯು ಸಮೂಹವು ಅನುದಾನ ನೀಡಿದೆ.

ಎನ್‌ಎಲ್‌ಎಸ್‌ಐಯುನ ನೂತನ ಅಕಾಡೆಮಿಕ್‌ ಬ್ಲಾಕ್‌ನ (ಎನ್‌ಎಬಿ) ಮರು ಅಭಿವೃದ್ಧಿಗೆ ನೆರವು ನೀಡಲಾಗಿದೆ. ಎರಡು ಅಂತಸ್ತುಗಳ ಎನ್‌ಎಬಿಯನ್ನು 2014ರಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಉಪನ್ಯಾಸ ಕೊಠಡಿಗಳು, ವಿಚಾರ ಸಂಕಿರಣ ಕೊಠಡಿಗಳು, ಕಚೇರಿಗಳು ಮತ್ತು ಸಭಾ ಭವನ ಇದೆ. ಜೆಎಸ್‌ಡಬ್ಲ್ಯು ಅನುದಾನದಿಂದ ಹೆಚ್ಚುವರಿಯಾಗಿ ನಾಲ್ಕು ಮಹಡಿಗಳನ್ನು ನಿರ್ಮಿಸಲಾಗುತ್ತದೆ. ಆ ಮೂಲಕ ಕಚೇರಿ, ಸಂಶೋಧನೆಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸವಾಗಿದೆ. ಈ ಕಟ್ಟಡಕ್ಕೆ ʻಜೆಎಸ್‌ಡಬ್ಲ್ಯು ಅಕಾಡೆಮಿಕ್‌ ಬ್ಲಾಕ್‌ʼ ಎಂದು ಹೆಸರಿಸಲಾಗುತ್ತದೆ ಎಂದು ಜೆಎಸ್‌ಡಬ್ಲ್ಯು ಕಂಪನಿ ತಿಳಿಸಿದೆ.

ಎನ್‌ಎಲ್‌ಎಸ್‌ಐಯುನ ಒಳಗೊಳ್ಳುವಿಕೆ ಮತ್ತು ವಿಸ್ತರಣೆಗೆ ಈ ಅನುದಾನ ನೆರವಾಗಲಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಿಸುವ ಉದ್ದೇಶಕ್ಕೂ ಸಹಕಾರಿಯಾಗಲಿದೆ ಎಂದು ತಿಳಿಸಿದೆ.

‘ಕಂಪನಿ ನೀಡಿರುವ ಅನುದಾನದಡಿ ವಿಶ್ವದರ್ಜೆ ಮಟ್ಟದಲ್ಲಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಆ ಮೂಲಕ ವಿಶ್ವವಿದ್ಯಾಲಯದ ಬೆಳವಣಿಗೆಗೆ ಜೆಎಸ್‌ಡಬ್ಲ್ಯು ಬೆಂಬಲ ನೀಡಿದೆ. ಇದರಿಂದ ತಂತ್ರಜ್ಞಾನ ಪರಿವರ್ತನೆಗೆ ಸಹಕಾರಿಯಾಗಲಿದೆ. ಜೊತೆಗೆ, ಕಾನೂನು ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲು ನೆರವಾಗಲಿದೆ’ ಎಂದು ಎನ್‌ಎಲ್‌ಎಸ್‌ಐಯು ಕುಲಪತಿ ಪ್ರೊ.ಸುಧೀರ್‌ ಕೃಷ್ಣಸ್ವಾಮಿ ಹೇಳಿದ್ದಾರೆ.

‘ಕಾನೂನು ವೃತ್ತಿಯು ದೇಶದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಂಪನಿಯ ಈ ಕೊಡುಗೆಯು ದೀರ್ಘಾವಧಿಯಲ್ಲಿ ಕಾನೂನು ಪದವಿ ಪಡೆಯುವ ವಿದ್ಯಾರ್ಥಿಗಳ ಬದುಕಿನ ಬದಲಾವಣೆಗೆ ನೆರವಾಗಲಿದೆ. ಸಮರ್ಪಣಾ ಮನೋಭಾವದಿಂದ ದೇಶಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿರುವ ಯುವ ನಾಯಕರ  ಸಬಲೀಕರಣವು ಜೆಎಸ್‌ಡಬ್ಲ್ಯುನ ಗುರಿಯಾಗಿದೆ’ ಎಂದು ಜೆಎಸ್‌ಡಬ್ಲ್ಯು ಪ್ರತಿಷ್ಠಾನದ ಅಧ್ಯಕ್ಷೆ ಸಂಗೀತಾ ಜಿಂದಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT