ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೆಸ್ಟೀಜ್‌ನಿಂದ ಆಟೊ ವಿಷಲ್‌ ಇಂಡಕ್ಷನ್‌ ಕುಕ್‌ಟಾಪ್‌ ಬಿಡುಗಡೆ

Published 10 ಜುಲೈ 2024, 15:28 IST
Last Updated 10 ಜುಲೈ 2024, 15:28 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಅತಿದೊಡ್ಡ ಅಡುಗೆ ಮನೆ ಅಪ್ಲೈಯನ್ಸ್‌ಗಳ ಸಂಸ್ಥೆ ಟಿಟಿಕೆ ಪ್ರೆಸ್ಟೀಜ್‌, ‘ಆಟೊ ವಿಷಲ್‌ ಕೌಂಟರ್‌ ಇಂಡಕ್ಷನ್‌ ಕುಕ್‌ ಟಾಪ್‌’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಇದು ಪ್ರೆಸ್ಟೀಜ್‌ ಇಂಡಕ್ಷನ್‌ ಕುಕ್‌ ಟಾಪ್‌ಗಳಲ್ಲಿ ಮಾತ್ರ ಲಭ್ಯವಿದ್ದು, ಈ ವೈಶಿಷ್ಟ್ಯ ಪರಿಚಯಿಸಿದ ಮೊದಲ ಮತ್ತು ಏಕೈಕ ಬ್ರ್ಯಾಂಡ್‌ ಎಂಬ ಹೆಗ್ಗಳಿಕೆ ಪಡೆದಿದೆ.

ಅಡುಗೆಗೆ ಅಗತ್ಯವಿರುವ ಸೀಟಿ (ವಿಷಲ್‌) ಸಂಖ್ಯೆಯನ್ನು ಮೊದಲೇ ಹೊಂದಿಸುವ ಮೂಲಕ ಇಂಡಕ್ಷನ್‌ ಕುಕ್‌ ಟಾಪ್‌ ಸ್ವಯಂಚಾಲಿತವಾಗಿ ಅವುಗಳನ್ನು ಎಣಿಕೆ ಮಾಡುತ್ತದೆ. ಹೊಂದಿಸಿದ ಸೀಟಿ ತಲುಪಿದ ನಂತರ ತಾನಾಗೇ ಆಫ್‌ ಆಗುತ್ತದೆ. ಇದರಿಂದ ಅಡುಗೆ ಮಾಡುವವರು ಸೀಟಿ ಸಂಖ್ಯೆ ಲೆಕ್ಕ ಹಾಕುವುದು ಅಗತ್ಯವಿಲ್ಲ ಹಾಗೂ ಅದರ ಕಡೆ ಗಮನ ನೀಡುವುದು ತಪ್ಪುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಇಂಡಕ್ಷನ್‌, ಗ್ಯಾಸ್‌ ಸ್ಟೌಗಳಿಗಿಂತ ಸ್ವಲ್ಪ ಭಿನ್ನವಾಗಿದ್ದು, ಆಟೊ ಪ್ರೆಶರ್‌ ಕುಕಿಂಗ್‌ ಮೋಡ್‌ನ ಸ್ಮಾರ್ಟ್‌ ಫಂಕ್ಷನ್‌ ಇದೆ. ಇದು ಕುಕ್ಕರ್‌ನ ಚಟುವಟಿಕೆಯನ್ನು ಗ್ರಹಿಸುವ ಜೊತೆಗೆ ಕೀಪ್‌ ವಾರ್ಮ್‌ ಮೋಡ್‌ಗೆ ತಾನಾಗೇ ಬದಲಾಗುತ್ತದೆ. ಅಡುಗೆ ಮಾಡಲು ಸಮಯವನ್ನು ಉಳಿಸುವ ಜೊತೆಗೆ ಶೇ 25ರಷ್ಟು ವಿದ್ಯುತ್‌ ಉಳಿಸುತ್ತದೆ. ಇಂಡಕ್ಷನ್‌ ಕುಕ್‌ ಟಾಪ್‌ನಲ್ಲಿ ಕೂಲಿಂಗ್‌ ಸಿಸ್ಟಂ ವ್ಯವಸ್ಥೆ ಹೊಂದಿದ್ದು, ಹೈವೋಲ್ಟೇಜ್‌ ಸರ್ಜ್‌ ಪ್ರೊಟೆಕ್ಷನ್‌ನಂತಹ (ಎಚ್‌ವಿಎಸ್‌ಪಿ) ನಂತಹ ಸುರಕ್ಷತಾ ವೈಶಿಷ್ಟ ಹೊಂದಿದೆ.

ಈ ಇಂಡಕ್ಷನ್‌ ಎಲ್ಲ ಕಿಚನ್‌ ವೇರ್‌ ಚಿಲ್ಲರೆ ಮಳಿಗೆಗಳು ಮತ್ತು ಆನ್‌ಲೈನ್‌ ವೇದಿಕೆಗಳಲ್ಲಿ ದೊರೆಯಲಿದ್ದು, ಒಂದು ವರ್ಷದ ವಾರಂಟಿ ಇದೆ ಎಂದು ಕಂಪನಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ www.ttkprestige.com ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT