ಮಂಗಳವಾರ, ಜನವರಿ 26, 2021
16 °C

ಇದೇ ತಿಂಗಳಲ್ಲಿ ಕಲ್ಲಿದ್ದಲು ಗಣಿ ಹರಾಜು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಾಣಿಜ್ಯ ಉದ್ದೇಶದ ಕಲ್ಲಿದ್ದಲು ಗಣಿಗಳ ಮುಂದಿನ ಕಂತಿನ ಹರಾಜು ಪ್ರಕ್ರಿಯೆಯು ಇದೇ ತಿಂಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ದೇಶದ ಅರ್ಥವ್ಯವಸ್ಥೆಯ ಗಾತ್ರವನ್ನು 5 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಈಡೇರಿಸುವಲ್ಲಿ ಕಲ್ಲಿದ್ದಲು ವಲಯವು ಬಹುದೊಡ್ಡ ಕೊಡುಗೆ ನೀಡುವ ಸ್ಥಾನದಲ್ಲಿದೆ’ ಎಂದರು.

ವಿಶ್ವದಲ್ಲಿ ನಾಲ್ಕನೆಯ ಅತಿಹೆಚ್ಚಿನ ಕಲ್ಲಿದ್ದಲು ಗಣಿಗಳನ್ನು ಹೊಂದಿದ್ದರೂ ದೇಶವು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಶಾ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು