ಬುಧವಾರ, ಜುಲೈ 15, 2020
27 °C

ರೈತರ ನೆರವಿಗೆ ನಿಂಜಾಕಾರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾಜಾ ಉತ್ಪನ್ನಗಳ ಸರಬರಾಜು ಸಂಸ್ಥೆಯಾದ ನಿಂಜಾಕಾರ್ಟ್, ರೈತರಿಗೆ ನೆರವು ನೀಡಲು ಮುಂದಾಗಿದೆ.

ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಹುಡುಕಲು ಹೆಣಗಾಡುತ್ತಿರುವ ರೈತರು ಈಗ ನಿಂಜಾಕಾರ್ಟ್ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು.  ದೇಶದಾದ್ಯಂತ ಇರುವ ನಿಂಜಾಕಾರ್ಟ್‍ನ ವ್ಯವಸ್ಥಿತ ಸರಬರಾಜು ವ್ಯವಸ್ಥೆಯಡಿ ರೈತರ ಉತ್ಪನ್ನಗಳನ್ನು ತೋಟದಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಿತರಿಸುವ ವ್ಯವಸ್ಥೆ ಇದಾಗಿದೆ.

‘ಸ್ಥಳೀಯ ದಿನಸಿ ಅಂಗಡಿಗಳ ಸಹಭಾಗಿತ್ವದೊಂದಿಗೆ ಪ್ರಾರಂಭಿಸಲಾಗುವ ‘ಕೃಷಿಭೂಮಿ  ಫಲಗೊಳಿಸಿ’ ನೆರವು ಕಾರ್ಯಕ್ರಮವು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜಾರಿಗೆ ತರಲಾಗಿದೆ. ಗ್ರಾಹಕರು ಜೊಮ್ಯಾಟೊ, ಸ್ವಿಗ್ಗಿ, ಮತ್ತು ಡಂಜೊ ಮೂಲಕ  ತಾಜಾ ತರಕಾರಿ ಮತ್ತು ಹಣ್ಣುಗಳ ಖರೀದಿಗೆ ಬೇಡಿಕೆ ಸಲ್ಲಿಸಬಹುದಾಗಿದೆ’ ಎಂದು ನಿಂಜಾಕಾರ್ಟ್‌ನ ಸಿಇಒ  ತಿರುಕುಮಾರನ್ ನಾಗರಾಜನ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು