ಮಂಗಳವಾರ, ಮೇ 18, 2021
29 °C

ಬ್ಯಾಂಕ್ ಖಾಸಗೀಕರಣ: ಹೆಸರು ಅಂತಿಮಗೊಳಿಸಲಿರುವ ನೀತಿ ಆಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಖಾಸಗಿಯವರಿಗೆ ಮಾರಾಟ ಆಗಲಿರುವ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರು ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ನೀತಿ ಆಯೋಗ ಆರಂಭಿಸಿದೆ.

ಆಯೋಗವು ಕೇಂದ್ರ ಹಣಕಾಸು ಸಚಿವಾಲಯದ ಜೊತೆ ಸಮಾಲೋಚನೆ ನಡೆಸಿ ಎರಡು ಬ್ಯಾಂಕ್‌ಗಳ ಹೆಸರು ಅಂತಿಮಗೊಳಿಸಲಿದೆ. ಈ ವಿಚಾರವಾಗಿ ನೀತಿ ಆಯೋಗವು ಎರಡು ಸಭೆಗಳನ್ನು ಕರೆದಿದೆ ಎಂದು ಮೂಲಗಳು ತಿಳಿಸಿವೆ.

ಆಯೋಗವು ಹೆಸರುಗಳನ್ನು ಶಿಫಾರಸು ಮಾಡಿದ ನಂತರ, ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯು ಅದನ್ನು ಪರಿಶೀಲಿಸಲಿದೆ. ಅಂತಿಮ ತೀರ್ಮಾನವನ್ನು ಪ್ರಧಾನಿ ನೇತೃತ್ವದ ಸಚಿವ ಸಂಪುಟ ತೆಗೆದುಕೊಳ್ಳಲಿದೆ.

ಸಂಪುಟದ ಅನುಮೋದನೆ ಸಿಕ್ಕ ನಂತರ, ಖಾಸಗಿಯವರಿಗೆ ಮಾರಾಟ ಮಾಡಲು ಅಗತ್ಯವಿರುವ ಕಾನೂನು ರೂಪಿಸುವ ಕೆಲಸಗಳು ಆರಂಭವಾಗಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.