ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಧಿ ಆಮದು ಮಾಡಿಕೊಳ್ಳುವ ಯೋಚನೆ ಇಲ್ಲ: ಸರ್ಕಾರದ ಮೂಲಗಳ ಮಾಹಿತಿ

Last Updated 21 ಆಗಸ್ಟ್ 2022, 10:30 IST
ಅಕ್ಷರ ಗಾತ್ರ

ನವದೆಹಲಿ: ಅಗತ್ಯಕ್ಕೆ ತಕ್ಕಷ್ಟು ಗೋದಿ ದಾಸ್ತಾನನ್ನು ದೇಶ ಹೊಂದಿದ್ದು, ಆಮದು ಮಾಡಿಕೊಳ್ಳುವ ಯಾವುದೇ ಯೋಚನೆ ಸರ್ಕಾರಕ್ಕಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಸಾರ್ವಜನಿಕ ವಿತರಣೆಗಾಗಿ ಗೋದಿಯ ಸಾಕಷ್ಟು ದಾಸ್ತಾನು ಹೊಂದಿದೆ ಎಂದು ಅವರು ಹೇಳಿದರು.

‘ಗೋಧಿಯನ್ನು ಆಮದು ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ. ನಮ್ಮ ದೇಶೀಯ ಅಗತ್ಯವನ್ನು ಪೂರೈಸಲು ಸಾಕಷ್ಟು ದಾಸ್ತಾನನ್ನು ನಾವು ಹೊಂದಿದೆ‘ ಎಂದು ಮೂಲವೊಂದು ತಿಳಿಸಿದೆ.

ಭಾರತವು ಆಹಾರಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂಬ ಕೆಲವು ವರದಿಗಳ ಹಿನ್ನೆಲೆಯಲ್ಲೇ ಮಾಹಿತಿಯೂ ಹೊರಬಿದ್ದಿದೆ. .

ಭಾರತದ ಗೋಧಿ ಉತ್ಪಾದನೆಯು ಈ ಬಾರಿ ಸುಮಾರು ಶೇಕಡ 3ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. 106.84 ದಶಲಕ್ಷ ಟನ್‌ಗಳಿಗೆ ಉತ್ಪಾದನೆ ಕುಸಿದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದೇ ಹೊತ್ತಲ್ಲೇ ಒಟ್ಟಾರೆ ಆಹಾರ ಧಾನ್ಯ ಉತ್ಪಾದನೆಯು 2021-22ರ ಸಾಲಿನಲ್ಲಿ ದಾಖಲೆಯ 315.72 ದಶಲಕ್ಷ ಟನ್‌ಗಳಷ್ಟಾಗಿದೆ ಎಂದು ಅಂದಾಜಿಸಲಾಗುತ್ತಿದೆ.

ಉತ್ತರದ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಬಿಸಿಗಾಳಿಯಿಂದಾಗಿ ಬೇಳೆ ನಷ್ಟವಾಗಿದ್ದು, ಗೋಧಿ ಉತ್ಪಾದನೆಯೂ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಕೃಷಿ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ 2021-22 ರ ಬೆಳೆ ವರ್ಷದ ನಾಲ್ಕನೇ ಮುಂಗಡ ಅಂದಾಜಿನ ಪ್ರಕಾರ, ಅಕ್ಕಿ, ಜೋಳ, ಕಾಳುಗಳು, ಸಾಸಿವೆ, ಎಣ್ಣೆಕಾಳುಗಳು ಮತ್ತು ಕಬ್ಬು ಬೆಳೆಯಲ್ಲಿ ದಾಖಲೆಯ ಉತ್ಪಾದನೆಯಾಗಿದೆ.

ಈ ತಿಂಗಳ ಆರಂಭದಲ್ಲಿ ಗೋಧಿ ಹಿಟ್ಟಿನ ಗಿರಣಿಗಾರರ ಸಂಸ್ಥೆಯು ದೇಶೀಯ ಸರಬರಾಜು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಿಸಲು ಗೋಧಿಯ ಮೇಲೆ ವಿಧಿಸಲಾಗುವ ಶೇ. 40ರ ಆಮದು ಸುಂಕವನ್ನು ರದ್ದುಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿತ್ತು.

‘ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ’ದ ಸದಸ್ಯರು ಬುಧವಾರ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರನ್ನು ಭೇಟಿ ಮಾಡಿ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಏರಿಕೆ ಮತ್ತು ಕೊರತೆಯ ಕುರಿತು ಚರ್ಚೆ ಮಾಡಿದೆ. ಈ ಬಗ್ಗೆ ಫೆಡರೇಶನ್‌ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದೆ.

ಫೆಡರೇಷನ್‌ನ ಅಧ್ಯಕ್ಷ ಅಂಜನಿ ಅಗರ್ವಾಲ್ ಮಾತನಾಡಿ, ಕಳೆದ 15 ದಿನಗಳಲ್ಲಿ ಗೋಧಿ ಬೆಲೆ ಕ್ವಿಂಟಲ್‌ಗೆ ₹300-350 ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಗೋದಿ ಕೊಯ್ಲು ಅವಧಿ ಒಂದು ತಿಂಗಳ ಹಿಂದಷ್ಟೇ ಮುಗಿದಿದ್ದು, ಹೊಸ ಬೆಳೆ ಲಭ್ಯವಾಗುವ ಹೊತ್ತಿಗೆ ಇನ್ನೂ ಎಂಟು ತಿಂಗಳಾದರೂ ಬೇಕಾಗುತ್ತದೆ. ಅಷ್ಟರಲ್ಲೇ ಕಳೆದ ಕೆಲವು ದಿನಗಳಲ್ಲಿ ಗೋಧಿ ಅಲಭ್ಯತೆ ಮತ್ತು ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ಬಗ್ಗೆ ಫೆಡರೇಷನ್‌ ಕಳವಳ ವ್ಯಕ್ತಪಡಿಸಿತ್ತು.

ಕೈಗಾರಿಕೆಗಳಿಗೆ ಟೆಂಡರ್ ಪ್ರಕ್ರಿಯೆಯ ಮೂಲಕ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ಗೋಧಿಯನ್ನು ಬಿಡುಗಡೆ ಮಾಡುವಂತೆಯೂ ಫೆಡರೇಷನ್‌ ಒತ್ತಾಯಿಸಿದೆ.

ಮೇ ತಿಂಗಳಲ್ಲಿ ಭಾರತವು ಗೋಧಿ ರಫ್ತನ್ನು ನಿಷೇಧಿಸಿತ್ತು.

ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ ಎಫ್‌ಸಿಐ ಗೋದಾಮುಗಳಲ್ಲಿ ಗೋಧಿ ದಾಸ್ತಾನು 134 ಲಕ್ಷ ಟನ್‌ಗಳಾಗುವ ನಿರೀಕ್ಷೆಯಿದೆ ಎಂದು ಜುಲೈನಲ್ಲಿ ಸರ್ಕಾರ ಹೇಳಿತ್ತು.

2022ರ ಜುಲೈ 1ರಂತೆ ಗೋಧಿಯ ಸಂಗ್ರಹಣೆಯು ಆಹಾರ ಧಾನ್ಯಗಳ ದಾಸ್ತಾನು ಮಾನದಂಡಗಳಿಗಿಂತ ಹೆಚ್ಚಾಗಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದರು.

2021-22ರ ಆರ್ಥಿಕ ವರ್ಷದಲ್ಲಿ ಭಾರತವು ದಾಖಲೆಯ 7 ದಶಲಕ್ಷ ಟನ್ ಗೋಧಿಯನ್ನು ರಫ್ತು ಮಾಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT