ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶದಲ್ಲಿ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆ: ₹ 7 ಲಕ್ಷದವರೆಗೆ ತೆರಿಗೆ ಇಲ್ಲ

Published 20 ಮೇ 2023, 16:04 IST
Last Updated 20 ಮೇ 2023, 16:04 IST
ಅಕ್ಷರ ಗಾತ್ರ

ನವದೆಹಲಿ: ಹಣಕಾಸು ವರ್ಷವೊಂದರಲ್ಲಿ ವಿದೇಶದಲ್ಲಿ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್ ಮೂಲಕ ₹7 ಲಕ್ಷದವರೆಗೆ ವೆಚ್ಚ ಮಾಡಿದರೆ ಯಾವುದೇ ರೀತಿಯ ತೆರಿಗೆ ಪಾವತಿಸಬೇಕಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ₹7 ಲಕ್ಷಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಜುಲೈ 1 ರಿಂದ ಶೇ 20ರಷ್ಟು ಮೂಲದಲ್ಲೇ ತೆರಿಗೆ ಕಡಿತ (ಟಿಸಿಎಸ್‌) ಆಗಲಿದೆ.

ಕೇಂದ್ರ ಸರ್ಕಾರವು ಈಚೆಗಷ್ಟೇ ವಿದೇಶದಲ್ಲಿ ಕ್ರೆಡಿಟ್‌ ಕಾರ್ಡ್ ಬಳಸಿ ಮಾಡುವ ವೆಚ್ಚವನ್ನು ಉದಾರೀಕೃತ ಪಾವತಿ ವ್ಯವಸ್ಥೆ (ಎಲ್‌ಆರ್‌ಎಸ್‌) ಅಡಿಯಲ್ಲಿ ತಂದಿದೆ. ಇದರಿಂದಾಗಿ ಜುಲೈ 1ರಿಂದ ವಿದೇಶದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸಿದರೆ ಅದಕ್ಕೆ ಶೇ 20ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ಕೇಂದ್ರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ‘ತೆರಿಗೆ ಭಯೋತ್ಪಾದನೆ’ ಎಂದು ಕೆಲವರು ಟೀಕಿಸಿದ್ದಾರೆ. ಹೀಗಾಗಿ ₹7 ಲಕ್ಷದವರೆಗಿನ ಮೊತ್ತಕ್ಕೆ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್ ಬಳಸಿದರೆ ಟಿಸಿಎಸ್‌ ಇಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ವಿದೇಶದಲ್ಲಿ ಚಿಕಿತ್ಸೆ ಮತ್ತು ಶಿಕ್ಷಣಕ್ಕೆ ಸದ್ಯ ಇರುವ ತೆರಿಗೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸಚಿವಾಲಯ ಹೇಳಿದೆ. ಸದ್ಯ, ವಿದೇಶದಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣಕ್ಕೆ ₹7 ಲಕ್ಷದವರೆಗೆ ಟಿಸಿಎಸ್‌ನಿಂದ ವಿನಾಯಿತಿ ಇದೆ. ₹7 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 5ರಷ್ಟು ಟಿಸಿಎಸ್‌ ಇದೆ. ಶಿಕ್ಷಣ ಸಾಲ ಪಡೆದಿರುವವರಿಗೆ ಟಿಸಿಎಸ್‌ ಶೇ 0.5ರಷ್ಟು ಆಗಲಿದೆ.

ವಿದೇಶದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಟಿಸಿಎಸ್‌ ವಿಧಿಸುವ ಮೂಲಕ ಸರ್ಕಾರವು ತೆರಿಗೆ ಭಯೋತ್ಪಾದನೆಯನ್ನು ಅಂತ್ಯಗೊಳಿಸುವ ಭರವಸೆಯಿಂದ ಹಿಂದೆ ಸರಿದಿದೆ ಎಂದು ಐ.ಟಿ. ಉದ್ಯಮಿ ಟಿ.ವಿ. ಮೋಹನ್‌ದಾಸ್‌ ಪೈ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT