ನವದೆಹಲಿ: ಉದ್ಯಮಿ ಮೆಹ್ಲಿ ಮಿಸ್ತ್ರಿ ಅವರನ್ನು ಟಾಟಾ ಟ್ರಸ್ಟ್ಸ್ನ ಟ್ರಸ್ಟಿಯಾಗಿ ಮರುನೇಮಕ ಮಾಡುವುದನ್ನು ಟ್ರಸ್ಟ್ಸ್ನ ಅಧ್ಯಕ್ಷ ನೋಯಲ್ ಟಾಟಾ ಹಾಗೂ ಅವರ ಜೊತೆ ಗುರುತಿಸಿಕೊಂಡಿರುವ ಇತರ ಇಬ್ಬರು ಒಟ್ಟಾಗಿ ತಡೆದಿದ್ದಾರೆ.

ಇದು ಟಾಟಾ ಟ್ರಸ್ಟ್ಸ್ನಲ್ಲಿನ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಿದೆ ಎನ್ನಲಾಗಿದೆ. ಮಿಸ್ತ್ರಿ ಅವರ ಮರುನೇಮಕದ ವಿರುದ್ಧವಾಗಿ ನೋಯಲ್ ಟಾಟಾ, ವೇಣು ಶ್ರೀನಿವಾಸನ್ (ಇವರು ಟಿವಿಎಸ್ ಮೋಟರ್ ಕಂಪನಿಯ ಗೌರವಾಧ್ಯಕ್ಷರೂ ಹೌದು) ಹಾಗೂ ಇನ್ನೊಬ್ಬ ಟ್ರಸ್ಟಿ ವಿಜಯ್ ಸಿಂಗ್ ಅವರು ಮತ ಚಲಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಟ್ರಸ್ಟ್ಸ್ನಲ್ಲಿ ಇರುವ ಇತರ ಟ್ರಸ್ಟಿಗಳಾದ ಪ್ರಮೀತ್ ಝಾವೆರಿ, ಡೇರಿಯಸ್ ಖಂಬಾಟ ಮತ್ತು ಜೆಹಾಂಗಿರ್ ಎಚ್ಸಿ ಜೆಹಾಂಗಿರ್ ಅವರು ಮಿಸ್ತ್ರಿ ಪರವಾಗಿ ನಿಂತಿದ್ದರು ಎಂದು ಗೊತ್ತಾಗಿದೆ.

ಟಾಟಾ ಟ್ರಸ್ಟ್ಸ್ನಲ್ಲಿ ನೋಯಲ್ ಟಾಟಾ ಮತ್ತು ಮಿಸ್ತ್ರಿ ಅವರು ಎರಡು ಅಧಿಕಾರ ಕೇಂದ್ರಗಳಂತೆ ಇದ್ದಾರೆ. ನೋಯಲ್ ಟಾಟಾ ಅವರಿಗೆ ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರ ಬೆಂಬಲವಿದೆ. ಶ್ರೀನಿವಾಸನ್ ಅವರನ್ನು ಕಳೆದ ವಾರ ಅವಿರೋಧ ನಿರ್ಣಯದ ಮೂಲಕ ಆಜೀವ ಟ್ರಸ್ಟಿಯಾಗಿ ನೇಮಿಸಲಾಗಿದೆ.

ತಮ್ಮ ಮುಂದಿನ ನಡೆ ಏನು ಎಂಬುದನ್ನು ಮಿಸ್ತ್ರಿ ಅವರು ತಿಳಿಸಿಲ್ಲ. ಆದರೆ ಅವರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.