ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

14 ಸಾವಿರ ಉದ್ಯೋಗ ಕಡಿತ: ನೋಕಿಯಾ

Published : 19 ಅಕ್ಟೋಬರ್ 2023, 14:38 IST
Last Updated : 19 ಅಕ್ಟೋಬರ್ 2023, 14:38 IST
ಫಾಲೋ ಮಾಡಿ
Comments

ಸ್ಟಾಕ್‌ಹೋಮ್‌: ನೋಕಿಯಾ ಕಂಪನಿಯು ವೆಚ್ಚ ಕಡಿಮೆ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿ 14 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಗುರುವಾರ ಹೇಳಿದೆ.

ಮೂರನೇ ತ್ರೈಮಾಸಿಕದಲ್ಲಿ 5ಜಿ ಸಾಧನಗಳನ್ನೂ ಒಳಗೊಂಡು ಒಟ್ಟು ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಹೀಗಾಗಿ ವೆಚ್ಚ ತಗ್ಗಿಸಲು ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ. ಕಂಪನಿಯು ತನ್ನ ಒಟ್ಟು ವೆಚ್ಚವನ್ನು 2026ರ ಒಳಗಾಗಿ ₹6,988 ಕೋಟಿಯಿಂದ ₹9,960 ಕೋಟಿಯವರೆಗೆ ತಗ್ಗಿಸುವ ಗುರಿಯನ್ನು ಇಟ್ಟುಕೊಂಡಿದೆ.

ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಮಾರಾಟವು ₹54,912 ಕೋಟಿಯಿಂದ ₹43,824 ಕೋಟಿಗೆ ಇಳಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT